ಮುಂಬೈ: ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ, ರಾಜ್ಯ ಸಭಾ ಸದಸ್ಯ ಸಂಜಯ್ ರಾವುತ್ ಅವರಿಗೆ ಮೂರು ತಿಂಗಳು ಬಳಿಕ ಜಾಮೀನು ದೊರೆತಿದೆ.
ಬೆಂಕಿ ಚೆಂಡು ನಾಯಕ ಎಂದೇ ಖ್ಯಾತರಾದ ಸಂಜಯ್ ರಾವುತ್ ರ ಜಾಮೀನು ಅರ್ಜಿ ವಿಚಾರಿಸಿ ಅಕ್ಟೋಬರ್ 21ರಂದು ತೀರ್ಪನ್ನು ಕಾದಿರಿಸಿತ್ತು.
ಮುಂಬೈ ವಾಸದ ಕಾಲೊನಿಗಳ ಮರು ಅಭಿವೃದ್ಧಿ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದಿ ಆರೋಪಿಸಿ ಆಗಸ್ಟ್ 1ರಂದು ಇಡಿ- ಸಂಜಯ್ ರಾವುತ್ ರನ್ನು ವಶಕ್ಕೆ ತೆಗೆದುಕೊಂಡಿತ್ತು. ಅವರು ಅಕ್ರಮ ಹಣ ವರ್ಗಾವಣೆ ಸಂಬಂಧವಾಗಿ ಎರಡು ಬಾರಿ ಇಡಿ ಸಮನ್ಸ್ ಜಾರಿಗೊಳಿಸಿದ್ದರೂ ರಾವುತ್ ಪ್ರತಿಕ್ರಿಯಿಸಿರಲಿಲ್ಲ. ಇದೆಲ್ಲ ರಾಜಕೀಯ ಸೇಡಿನ ಆಟ ಎಂದು ರಾವುತ್ ಆಪಾದಿಸಿದ್ದರು.
ಉದ್ಧವ್ ಠಾಕ್ರೆ ಬಣ ಮತ್ತು ಬಿಜೆಪಿಗೆ ಹಾರಿದ ಶಿಂಧೆ ಬಣದ ನಡುವೆ ರಾವುತ್ ರ ಬಂಧನ ದೊಡ್ಡ ವಿಷಯವಾಗಿತ್ತು. ಅವರ ಬಂಧನದ ಬಳಿಕ “ಅವರು ಮುಗ್ಧರಾದರೆ ಕೇಂದ್ರೀಯ ಏಜೆನ್ಸಿಗೆ ಹೆದರಬೇಕಾಗಿಲ್ಲ” ಎಂದು ಶಿಂಧೆ ಹೇಳಿದ್ದರು.
ಅವರ ಬಂಧನ ಸಾಕಷ್ಟು ಪ್ರತಿಭಟನೆಗಳನ್ನೂ ಕಂಡಿತ್ತು. “ನನಗೆ ಸಂಜಯ್ ರಾವುತ್ ಬಗ್ಗೆ ಹೆಮ್ಮೆ ಇದೆ. ನಮ್ಮ ವಿರುದ್ಧ ಮಾತನಾಡುವ ಎಲ್ಲರನ್ನು ಬರಿದಾಗಿಸುವುದು ನಮ್ಮಿಂದ ಸಾಧ್ಯವಿದೆ. ಈಗ ನಡೆದಿರುವುದು ಕೆಲವರ ಸೇಡಿನ ರಾಜಕೀಯ” ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದರು.
ಈ ವೇಳೆ ಕಾಂಗ್ರೆಸ್ ಸಹಿತ ಪ್ರತಿ ಪಕ್ಷಗಳ ಹಲವು ನಾಯಕರು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿ, ವಿಪಕ್ಷಗಳ ಮೇಲೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದರು.