ಹಿಮಾಚಲಪ್ರದೇಶದ ಬಿಜೆಪಿಯಲ್ಲಿ ಬಂಡಾಯಗಾರರ ಸಂಖ್ಯೆ ಹೆಚ್ಚಿದೆ: ಪಿ.ಕೆ. ದುಮಾಳ್

Prasthutha|

ಶಿಮ್ಲಾ: ಬಿಜೆಪಿಯಲ್ಲಿ ಬಹಳ ಮಂದಿ ಬಂಡಾಯಗಾರರು ಇದ್ದಾರೆ. ನನಗೆ ಈ ಬಾರಿ ಟಿಕೆಟ್ ನೀಡದಿರುವುದು ಅತೃಪ್ತಿ ತಂದಿದೆ ಎಂದು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಪ್ರೇಮಕುಮಾರ್ ದುಮಾಳ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

- Advertisement -

 ನವೆಂಬರ್ 12ರ ಚುನಾವಣೆಗೆ ಈಗಾಗಲೆ ಸಾಕಷ್ಟು ಜನರು ಬಂಡಾಯಗಾರರು ಇದ್ದಾರೆ; ಇದಕ್ಕೆ ಮುಖ್ಯ ಕಾರಣ ಟಿಕೆಟ್ ಹಂಚಿಕೆಯಲ್ಲಿ ಆಗಿರುವ ಲೋಪ ಎಂದು ದುಮಾಳ್ ಹೇಳಿದರು.

“ಚುನಾವಣೆಯಲ್ಲಿ ಬಂಡಾಯಗಾರರು ಇದ್ದಾರೆ ಎಂದ ಮೇಲೆ ಪಕ್ಷಕ್ಕೆ ಹಾನಿ ಆಗುವುದು ಸಹಜ. ಪಕ್ಷದಿಂದ ಹೊರಗೆ ಹೋಗುವವರು ಅವರ ಜೊತೆಗೆ ಒಂದಷ್ಟು ಮತಗಳನ್ನು ತೆಗೆದುಕೊಂಡು ಹೋಗುತ್ತಾರೆ. 68 ಕ್ಷೇತ್ರಗಳಲ್ಲಿ 21 ಮಂದಿ ಬಿಜೆಪಿ ಬಂಡಾಯಗಾರರು ಸ್ವತಂತ್ರರಾಗಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಕೆಲವರು ಇತ್ತೀಚೆಗೆ ಬಿಜೆಪಿಗೆ ಸೇರಿದವರು ಎಂದೂ ಪ್ರೇಮಕುಮಾರ್ ಹೇಳಿದರು. 

- Advertisement -

ಅಲ್ಲದೆ ಕಾಂಗ್ರೆಸ್ಸಿನಲ್ಲೂ ಸಾಕಷ್ಟು ಮಂದಿ ಬಂಡಾಯಗಾರರು ಇದ್ದಾರೆ ಎಂದೂ ಪ್ರೇಮಕುಮಾರ್ ಹೇಳಿದರು.

ಆದರೆ ಕಾಂಗ್ರೆಸ್ ಬಂಡಾಯಗಾರರ ಸಂಖ್ಯೆ ಒಂದಂಕಿಯದಾಗಿದೆ.

“ಬಿಜೆಪಿಯಲ್ಲಿ ಹೆಚ್ಚು ಬಂಡಾಯಗಾರರು ಇದ್ದಾರೆ ಎಂದರೆ, ಸರಕಾರ ರಚಿಸಬಹುದಾದ ಪಕ್ಷದ ಟಿಕೆಟ್ಟಿಗೆ ಹೆಚ್ಚು ಬೇಡಿಕೆ ಇರುತ್ತದೆ.” ಎಂದು ಸಹ ಅವರು ಹೇಳಿದರು.

“ನಾನು ಎಲ್ಲ ಬಂಡಾಯಗಾರರನ್ನು ಕರೆದು ಮಾತನಾಡಿದೆ. ಪಕ್ಷದ ಪರ ನಿಲ್ಲುವಂತೆ ಕೇಳಿಕೊಂಡೆ. ಒಂದು ಬಿದ್ದು ಹೋದ ಕೂದಲು, ಉದುರಿದ ಹಲ್ಲಿನಂತೆ ಸಮಾಜದಲ್ಲಿ ತಿರಸ್ಕೃತನಾದ ವ್ಯಕ್ತಿಯು ಬದುಕಿನಲ್ಲಿ ಸೂಕ್ತ ಸ್ಥಾನಮಾನ ಮತ್ತೆ ಪಡೆಯುವುದು ಸಾಧ್ಯವಿಲ್ಲ.”

ಬಂಡಾಯಗಾರರು ಭಾವನಾತ್ಮಕವಾಗಿ ಕಳಚಿಕೊಂಡವರು. ಕೆಲವರಿಗೆ ಕೊಟ್ಟ ಆಶ್ವಾಸನೆಗಳನ್ನು ನೆರವೇರಿಸಲಾಗಿಲ್ಲ. ಪ್ರತಿಯೊಬ್ಬ ಬಂಡಾಯಗಾರರಿಗೂ ಅವರದೇ ಆದ ಕಾರಣಗಳಿರುತ್ತವೆ ಎಂದರು.



Join Whatsapp