SDPI ಮಂಗಳೂರು: ನಗರ ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಕಾರ್ಯಕರ್ತರ ಸಭೆ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಕಾರ್ಯಕರ್ತರ ಸಭೆಯು ಗುರುಪುರ ಕ್ಯೆಕಂಬದ ಪ್ರೀಮಿಯರ್ ಹಾಲ್ ನಲ್ಲಿ ನಡೆಯಿತು.

- Advertisement -

ಈ ಸಭೆಯಲ್ಲಿ ಮುಂಬರುವ ಮಂಗಳೂರು ನಗರ ಉತ್ತರ ವಿಧಾನಸಭಾ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಅಶ್ರಫ್ ಅಡ್ಡೂರು ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಅಭ್ಯರ್ಥಿಯ ಸ್ಪರ್ಧೆಯ ಬಗ್ಗೆ , ಅನ್ಯಾಯ ಅನೀತಿಗಳ ವಿರುದ್ಧ ವಿಧಾನಸೌಧದಲ್ಲಿ ಧ್ವನಿಯಾಗಳು ಎಸ್.ಡಿ.ಪಿ.ಐ ಅಭ್ಯರ್ಥಿಗಳಿಗೆ ಜನರು ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.

- Advertisement -

ಅರಾಜಕತೆ ಕೂಡಿರುವ ಆಡಳಿತ ವ್ಯವಸ್ಥೆಯನ್ನು ಸರಿ ಪಡಿಸುವ ತನಕ ನಮ್ಮ ಹೋರಾಟ ಮತ್ತು ಪ್ರಯತ್ನಗಳನ್ನು ನಿಲ್ಲಿಸಬಾರದು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಹಾಗೂ ನೆರೆದಿರುವ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ನಮ್ಮ ಬೂತ್ ನಮ್ಮ ಶಕ್ತಿ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಯಶಸ್ವಿಗೊಳಿಸಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಕಟ್ಟಲು ಇಲ್ಯಾಸ್ ಕರೆ ನೀಡಿದರು.

ಕ್ಷೇತ್ರ ಸಮಿತಿ ನಾಯಕರಾದ ನಾಸಿರ್ ಉಳಾಯಿಬೆಟ್ಟು, ಅಝರ್ ಉಳಾಯಿಬೆಟ್ಟು, ಗುರುಪುರ ಬ್ಲಾಕ್ ಕಾರ್ಯದರ್ಶಿ ಸಾಹಿಕ್ ಅಡ್ಡೂರು, ಅಡ್ಯಾರ್ ಬ್ಲಾಕ್ ಕಾರ್ಯದರ್ಶಿ ಫ್ಯೆಝಲ್ ಬದ್ರಿಯಾನಗರ ಹಾಗೂ ಕ್ಷೇತ್ರ ವ್ಯಾಪ್ತಿಯ ಪಕ್ಷದ ಚುನಾಯಿತ ಪಂಚಾಯತ್ ಸದಸ್ಯರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.



Join Whatsapp