ಮಿತಿಮೀರಿದ ವಾಯುಮಾಲಿನ್ಯ: ವಾಹನಗಳಿಗೆ ನೋಯ್ಡಾ ಪ್ರವೇಶ ನಿಷೇಧ!

Prasthutha|

ನವದೆಹಲಿ: ಮಿತಿ ಮೀರಿದ ವಾಯುಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಪಕ್ಕದಲ್ಲಿರುವ ನೋಯ್ಡಾದಲ್ಲಿಯೂ ಮಾಲಿನ್ಯದ ನಟ್ಟ ತೀರಾ ಹದಗೆಟ್ಟಿದ್ದು, ಅಗತ್ಯ ಸೇವೆಯ ಡೀಸೆಲ್ ವಾಹನ ಹೊರತುಪಡಿಸಿ ಇತರೆಲ್ಲಾ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.

- Advertisement -

ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ನೋಯ್ಡಾ ಜಿಲ್ಲಾಡಳಿತ ಹಾಗೂ ನೋಯ್ಡಾ ಪ್ರಾಧಿಕಾರವು ಈ ಕ್ರಮ ಕೈಗೊಂಡಿದೆ. ಅಗತ್ಯ ಸೇವೆಗಳ ಡೀಸೆಲ್ ವಾಹನ, ಅದರ ಯುರೋ ಸಿಕ್ಸ್ ಎಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಗೌತಮ ಬುದ್ದ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸಾಮಾನ್ಯ ಮಟ್ಟ ತಲುಪುವರೆಗೆ ಎಲ್ಲಾ ನಿರ್ಮಾಣ ಸಂಬಂಧಿ ಕೆಲಸಗಳನ್ನು ನಿಷೇಧಿಸಲಾಗಿದೆ. ನಿಯಮ ಮೀರಿ ಕೆಲಸ ಮಾಡಿದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪ್ರಾಧಿಕಾರ ಸೂಚಿಸಿದೆ.

ದೆಹಲಿ ಸರಕಾರವು ನಿನ್ನೆಯಷ್ಟೆ ಶಾಲೆಗಳನ್ನು ಅನಿರ್ದಿಷ್ಟಾವದಿ ಮುಚ್ಚಲು ಆದೇಶ ಹೊರಡಿಸಿದ್ದು,ಈಗಾಗಲೇ ಶಾಲೆಗಳನ್ನು ಮುಚ್ಚಲಾಗಿದೆ. 1 ರಿಂದ 8ನೇ ತರಗತಿಯವರೆಗೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹೊರಾಂಗಣ ಚಟುವಟಿಕೆ ನಿಲ್ಲಿಸಲಾಗಿದೆ.

Join Whatsapp