ಬೆಂಗಳೂರು; ಬಣ್ಣದ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರ ಸಭಾಂಗಣದಲ್ಲಿ ಜಿತೋ ಕುಟುಂಬದೊಂದಿಗೆ ಕನ್ನಡ ಗೀತೆಗಳು – “ಭಾರತ್ ಕಿ ರಂಗ್ ಜಿತೋ ಕೆ ಗೀತೆ”ಯೊಂದಿಗೆ ದೀಪಾವಳಿ – ರಾಜ್ಯೋತ್ಸವ ಸಂಭ್ರಮ ಆಚರಿಸಲಾಯಿತು.
ವಿವಿಧ ರಾಜ್ಯಗಳ ಉಜ್ವಲ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ನೃತ್ಯ, ಉಡುಗೆ, ತೊಡುಗೆ ಗಮನ ಸೆಳೆಯಿತು. ಕನ್ನಡ ಗೀತೆಗಳಿಗೆ ಮಾರ್ವಾಡಿ ಸಮುದಾಯದವರು ಕುಣಿದು ಕುಪ್ಪಳಿಸಿದರು.
ಜಯೇಶ್ ಕೊಥಾರಿ ಅವರಡು ತಡ್ಕಾ ಆಫ್ ಮಾರ್ವಾಡಿ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರಘುದೀಕ್ಷಿತ್ ಅವರಿಂದ ಸುಮಧುರ ಜಾನಪದ ಗೀತೆ ಪ್ರಸ್ತುತಪಡಿಸಲಾಯಿತು. ಪಂಜಾಬಿ – ರಾಜಸ್ಥಾನ – ದಕ್ಷಿಣ ಭಾರತದ ಸಾಂಸ್ಕೃತಿಕ ಕಾರ್ಯಕ್ರಮಗಳ ಮಿಶ್ರಣದ ಶೈಲಿ ಅಮೋಘವಾಗಿತ್ತು.
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೊಯಾ, ಪ್ರಾಯೋಜಕ ರಮೇಶ್ ರಾಜ್, ಪುಷ್ಪರಾಜ್, ದಿನೇಶ್ ಕುಮಾರ್ ಬೊಹ್ರಾ ಕುಟುಂಬ ಮತ್ತಿತರು ಸಂಭ್ರಮದಲ್ಲಿ ಮಿಂದೆದ್ದಿತು.
ಮಾರ್ವಾಡಿ ಸಮುದಾಯದ ತಿಂಡಿ, ತಿನಿಸುಗಳು, ಕರ್ನಾಟಕದ ಶೈಲಿಯ ವಿಭಿನ್ನ ಆಹಾರ ದೀಪಾವಳಿ – ರಾಜ್ಯೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸಿತು.