ರೂ. 971 ಕೋಟಿ ವೆಚ್ಚದ ನೂತನ ಸಂಸತ್ ಭವನಕ್ಕೆ ಇಂದು ಶಿಲಾನ್ಯಾಸ | ಪ್ರಧಾನಿ ಮೋದಿ, ಗಣ್ಯರು ಸಾಥ್

Prasthutha|

ನವದೆಹಲಿ : ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ಇಂದು 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸಂಸತ್ ಭವನ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಅನೇಕ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12:55ಕ್ಕೆ ಭೂಮಿ ಪೂಜೆ, ಬಳಿಕ ಸಂಸತ್ ಭವನದ ಶಿಲಾನ್ಯಾಸ ನಡೆಯಲಿದೆ.

- Advertisement -

ಭೂಮಿ ಪೂಜೆ ಸಮಾರಂಭಕ್ಕೆ ಕೇವಲ 200 ಗಣ್ಯರು ಮಾತ್ರ ಉಪಸ್ಥಿತರಿರುತ್ತಾರೆ. 64,500 ಚ.ಮೀ. ವಿಸ್ತೀರ್ಣದಲ್ಲಿರುವ ನೂತನ ಕಟ್ಟದ ಭೂಕಂಪವನ್ನು ತಡೆಯುವ ಸಾಮರ್ಥ್ಯ ಹೊಂದಲಿದೆ.

ಮುಂದೆ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಲಿರುವ ಸಾಧ್ಯತೆಯಿರುವುದರಿಂದ, ಭವಿಷ್ಯದ 100 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ಹೊಸ ಸಂಸತ್ ಭವನದ ಆಸನಗಳು 60 ಸೆ.ಮೀ. ಅಗಲ ಮತ್ತು 40 ಸೆ.ಮೀ. ಎತ್ತರ ವಿರಲಿದೆ.

- Advertisement -

ಈ ಕಟ್ಟಡ ನಾಲ್ಕು ಮಹಡಿಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿಗಳು ಬರಲು ಒಂದು ದ್ವಾರ, ಸ್ಪೀಕರ್, ರಾಜ್ಯಸಭಾಧ್ಯಕ್ಷರುಗಳಿಗೆ ಒಂದು ದ್ವಾರ, ಸಂಸದರಿಗಾಗಿ ಒಂದು ದ್ವಾರ, ಸಾಮಾನ್ಯ ದ್ವಾರ ಮತ್ತು ಸಾರ್ವಜನಿಕರಿಗಾಗಿ ಎರಡು ಪ್ರವೇಶ ದ್ವಾರಗಳಿರಲಿವೆ. ಅಧಿವೇಶನ ನಡೆಯುವಾಗ 1,224 ಸದಸ್ಯರಿಗೆ ಕೂರಲು ಅವಕಾಶ ಕಲ್ಪಿಸಬಹುದಾಗಿದೆ.

ಪ್ರಸ್ತುತ ಈಗಿರುವ ಸಂಸತ್ ಭವನಕ್ಕೆ 1921ರಲ್ಲಿ ಶಂಕು ಸ್ಥಾಪನೆ ಮಾಡಲಾಗಿತ್ತು. ಆ ವೇಳೆ 83 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. 1927ರ ಜ.18ರಂದು ಈಗಿರುವ ಸಂಸತ್ ಭವನವನ್ನು ಉದ್ಘಾಟಿಸಲಾಗಿತ್ತು.   

Join Whatsapp