ಬೆಳ್ತಂಗಡಿ: ಇಸ್ಪೀಟ್ ಅಡ್ಡೆಗೆ ದಾಳಿ; 9 ಮಂದಿ ಪೊಲೀಸ್ ವಶಕ್ಕೆ

Prasthutha|

ಬೆಳ್ತಂಗಡಿ: ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೋಲಿಸರು ನಗದು ಸಹಿತ 9 ಜನರನ್ನು ವಶಕ್ಕೆ ಪಡೆದಿರುವ ಘಟನೆ ಶಿಶಿಲ ಗ್ರಾಮದ ಕಂಚಿನಡ್ಕ ಸರಕಾರಿ ಗುಡ್ಡ ಪ್ರದೇಶದಲ್ಲಿ ನಡೆದಿದೆ.

- Advertisement -


ಆರೋಪಿಗಳನ್ನು ಶಿಶಿಲ ಗ್ರಾಮದ ಓಟ್ಲ ವೆಂಕಪ್ಪ ಪೂಜಾರಿ(55), ಮಚ್ಚಿರಡ್ಕ ಸುರೇಶ್(33) ಪರಾರಿ ಬಾಳ ಹಿತ್ತಿಲು ವಸಂತ ಗೌಡ(48), ನಾಗನಡ್ಕ ಕೃಷ್ಣಪ್ಪ ಗೌಡ(45), ಅಂಬೆತ್ತಡ್ಕ ಸದಾಶಿವ(38), ಅಂಬೆತ್ತಡ್ಕ ಮನೆಯ ಹೊನ್ನಪ್ಪ (47), ಶಿಬಾಜೆ ಗ್ರಾಮದ ಐಂಗುಡ ಶಿವರಾಮ ಗೌಡ(53), ಕಡಬ ಗ್ರಾಮದ ಮುಳಿಮಜಲು ಪೊಡಿಯಾ(50), ಕಡಬ ತಾಲೂಕಿನ ಮುಳಿಮಜಲು ಮನೆಯ ಕೇಶವ(42) ಎಂದು ಗುರುತಿಸಲಾಗಿದೆ.


52 ವಿವಿಧ ಜಾತಿಯ ಇಸ್ಪೀಟ್ ಎಲೆಗಳು, 11,370 ರೂ ನಗದು, ದ್ವಿಚಕ್ರ ವಾಹನ ಮತ್ತು ಮಾರುತಿ ಓಮಿನಿ ಕಾರು ಸಹಿತ ಅಂದಾಜು ಮೌಲ್ಯ 1,01,370 ರೂ ಗಳ ಸೊತ್ತು ವಶಪಡಿಸಿಕೊಂಡಿದ್ದಾರೆ.



Join Whatsapp