ಬಂಧಿತ ಜಾಮಿಯಾ ವಿದ್ಯಾರ್ಥಿಗೆ ಪರೀಕ್ಷೆಗೆ ತಯಾರಾಗಲು ಅತಿಥಿ ಗೃಹ: ಹೈಕೋರ್ಟ್ ಸೂಚನೆ

Prasthutha|

ಹೊಸದಿಲ್ಲಿ: ಉತ್ತರ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಬಂಧಿತರಾಗಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆ.ಎಂ.ಐ) ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾರಿಗೆ ಡಿಸೆಂಬರ್ 4.ರಂದು ನಿಗದಿಯಾಗಿರುವ ಪರೀಕ್ಷೆಗೆ ಅಧ್ಯಯನ ಮಾಡಲು ಮತ್ತು ಹಾಜರಾಗಲು ಸಾಧ್ಯವಾಗುವಂತೆ ಅತಿಥಿ ಗೃಹಕ್ಕೆ ಕೊಂಡೊಯ್ಯಬೇಕೆಂದು ಜೈಲು ಅಧಿಕಾರಿಗಳಿಗೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ.

- Advertisement -

ಆರೋಪಿ ವಿದ್ಯಾರ್ಥಿಗೆ ಅಧ್ಯಯನ ಸಾಮಾಗ್ರಿಗಳನ್ನು ತನ್ನೊಂದಿಗೆ ಕೊಂಡೊಯ್ಯಲು ಮತ್ತು ಯಾವುದಾದರೂ ಇತರ ಕಲಿಕೆ ಸಾಮಾಗ್ರಿಗಳ ಅಗತ್ಯವಿದ್ದರೆ ಒದಗಿಸುವಂತೆ ನ್ಯಾಯಮೂರ್ತಿ ಮನೋಜ್ ಕುಮಾರ್ ಒಹ್ರಿ ಜೈಲು ಅಧೀಕ್ಷಕರಿಗೆ ಸೂಚಿಸಿದ್ದಾರೆ.

ಪೊಲೀಸರು ಸಲಹೆಯಿತ್ತಿರುವ ಮತ್ತು ತನ್ಹಾರ ವಕೀಲರು ಸಮ್ಮತಿಸಿರುವ ಲಜ್ಪತ್ ನಗರ ಅತಿಥಿ ಗೃಹಕ್ಕೆ ಕೊಂಡೊಯ್ಯುವಂತೆ ಸೂಚಿಸಲಾಗಿದೆ. ಅತಿಥಿ ಗೃಹದಲ್ಲಿರುವಾಗ ತನ್ನ ವಕೀಲರಿಗೆ ದಿನಕ್ಕೊಮ್ಮೆ ಕರೆ ಮಾಡಲು ತನ್ಹಾರಿಗೆ ನ್ಯಾಯಾಲಯ ಅನುಮತಿಸಿದೆ.

- Advertisement -

ಡಿ.4, 5 ಮತ್ತು 7ರಂದು ಪರೀಕ್ಷೆಗಾಗಿ ಅತಿಥಿ ಗೃಹದಿಂದ ಜೆ.ಎಂ.ಐ ವಿಶ್ವವಿದ್ಯಾನಿಲಯಕ್ಕೆ ಕೊಂಡೊಯ್ಯಬೇಕು. ಮೂರು ಪರೀಕ್ಷೆಗಳು ಮುಗಿದ ಬಳಿಕ ಜೈಲಿಗೆ ವಾಪಾಸು ಕರೆತರಬೇಕು ಎಂದು ನ್ಯಾಯಾಲಯ ಹೇಳಿದೆ.



Join Whatsapp