ಮತ್ತದೇ ಅರಚಾಟ: ನಾವು ಗೆದ್ದಿದ್ದೇವೆ ಎಂದ ಟ್ರಂಪ್: ಫಲಿತಾಂಶ ತಲೆಕೆಳಗಾಗಿಸಲು ಜಾರ್ಜಿಯಾ ರಾಜ್ಯಪಾಲರಿಗೆ ಕರೆ

Prasthutha|

ಯುನೈಟೆಡ್ ಸ್ಟೇಟ್ಸ್ ನ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ಪುರಾವೆಗಳಿಲ್ಲದೆ ದೇಶದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಪೂರ್ವ ನಿರ್ಧರಿತವೆಂದು ಹೇಳಿದ್ದಾರೆ. ಎ.ಎಫ್.ಪಿ ಈ ಕುರಿತು ವರದಿ ಮಾಡಿದೆ.

“ಮೋಸ ಮಾಡಲಾಗಿದೆ. ಅದು ಪೂರ್ವನಿರ್ಧರಿತ ವ್ಯವಹಾರವಾಗಿತ್ತು” ಎಂದು ಟ್ರಂಪ್ ಜಾರ್ಜಿಯಾದ ವಲ್ದೊಸ್ತಾದಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ. “ನಾವು ಈ ಚುನಾವಣೆಯನ್ನು ಗೆಲ್ಲುತ್ತಿದ್ದೇವೆ. ನಾವು ಇನ್ನೂ ಅದನ್ನು ಗೆಲ್ಲುತ್ತೇವೆ” ಎಂದು ಅವರು ಹೇಳಿದ್ದಾರೆ.

- Advertisement -

ಜನವರಿ 5ರಂದು ನಡೆಯಲಿರುವ ಪ್ರಮುಖ ಸ್ಪರ್ಧೆಯನ್ನು ಎದುರಿಸ್ತುತ್ತಿರುವ ಇಬ್ಬರು ರಿಪಬ್ಲಿಕನ್ ಸೆನೆಟ್ ಅಭ್ಯರ್ಥಿಗಳ ಪರವಾಗಿ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಪ್ರಚಾರ ನಡೆಸುತ್ತಿದ್ದಾರೆ.

ಟ್ರಂಪ್ ರ ರಿಪಬ್ಲಿಕನ್ ಪಕ್ಷವು ಪ್ರಸ್ತುತ ಮೇಲ್ಮನೆಯಲ್ಲಿ ತೆಳುವಾದ ಬಹುಮತ ಹೊಂದಿದೆ ಮತ್ತು ಈ ಸ್ಪರ್ಧೆಗಳಲ್ಲಿ ಗೆದ್ದರೆ ಜೋ ಬೈಡನ್ ರ ಡೆಮಾಕ್ರಟಿಕ್ ಆಡಳಿತವನ್ನು ಎದುರಿಸಬಹುದಾಗಿದೆ. ಎರಡು ಸೀಟುಗಳನ್ನು ಡೆಮಾಕ್ರಟ್ ಗಳು ಗೆದ್ದರೆ ಸೆನೆಟ್ ನಲ್ಲಿ ಅರ್ಧದಷ್ಟು ಸೀಟುಗಳು ಅವರ ನಿಯಂತ್ರಣದಡಿ ಬರಲಿದೆ ಮತ್ತು ಉಪಾಧ್ಯಕ್ಷರು ಟೈ ಬ್ರೇಕರ್ ಆಗಿ ಕೆಲಸಮಾಡಬಹುದಾಗಿದೆ. ಡೆಮಾಕ್ರಟ್ ಗಳು ಈಗಾಗಲೇ  ಕೆಳಮನೆ (ಪ್ರತಿನಿಧಿಗಳ ಸಭೆ)ಯನ್ನು ನಿಯಂತ್ರಿಸುತ್ತಿದ್ದಾರೆ.

“ಯಾವ ಪಕ್ಷವು ಪ್ರತೀ ಸಮಿತಿಯನ್ನು ಮುನ್ನಡೆಸಲಿದೆ, ಸಂವಿಧಾನದ ಪ್ರತೀ ತುಣುಕನ್ನು ಬರೆಯಲಿದೆ, ಪ್ರತಿಯೊಂದು ತೆರಿಗೆ ಪಾವತಿಗೊಂಡ ಡಾಲರ್ ಗಳನ್ನು ನಿಯಂತ್ರಿಸಲಿದೆ ಎಂದು ಜಾರ್ಜಿಯಾದ ಮತದಾರರು ನಿರ್ಧರಿಸಲಿದ್ದಾರೆ” ಎಂದು ಅವರು ಹೇಳಿದರು.

ತನ್ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರದಾ ಬೈಡನ್ ರ ಗೆಲುವನ್ನು ತಲೆಕೆಳಗಾಗಿಸಲು ರಾಜ್ಯ ಶಾಸಕಾಂಗದ ವಿಶೇಷ ಅಧಿವೇಶನ ಕರೆಯುವಂತೆ ಟ್ರಂಪ್ ಶನಿವಾರದಂದು ಮಾಡಿರುವ ಸರಣಿ ಟ್ವೀಟ್ ಗಳಲ್ಲಿ ಜಾರ್ಜಿಯಾದ ರಿಪಬ್ಲಿಕನ್ ರಾಜ್ಯಪಾಲ ಬ್ರಯಾನ್ ಕೆಂಪ್ ರನ್ನು ಒತ್ತಾಯಿಸಿದ್ದಾರೆ.

ನವೆಂಬರ್ ನಲ್ಲಿ ನಡೆದ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಜಾರ್ಜಿಯಾವನ್ನು ಕೇವಲ 12000 ಮತಗಳಿಂದ ಗೆದ್ದಿದ್ದರು. ಆ ಮೂಲಕ 1992ರಲ್ಲಿ ಬಿಲ್ ಕ್ಲಿಂಟನ್ ರ ಬಳಿಕ ರಿಪಬ್ಲಿಕನ್ ಭದ್ರಕೋಟೆಯನ್ನು ಗೆದ್ದ ಮೊದಲ ಡೆಮಾಕ್ರಟಿಕ್ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

- Advertisement -