ಅಹಮದಾಬಾದ್: ಮುಂಬರುವ ಗುಜರಾತ್ ಅಸೆಂಬ್ಲಿ ಚುನಾವಣೆಗೆ ಅಲ್ ಇಂಡಿಯಾ ಮಜ್ಲಿಸ್ ಎ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಒಟ್ಟು ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಕ್ಷದ ವರಿಷ್ಠ ಅಸದುದ್ದೀನ್ ಉವೈಸಿ, ಗುಜರಾತ್ ಜನರಿಗೆ AIMIM ಪಕ್ಷವು ಬಲವಾದ ಸ್ವತಂತ್ರ ರಾಜಕೀಯ ಧ್ವನಿಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಅಹಮದಾಬಾದ್ ನ ಬಾಪುನಗರದಿಂದ ಶಹನವಾಝ್ ಖಾನ್ ಮತ್ತು ಸೂರತ್ ನ ಲಿಂಬಾಯತ್ ನಿಂದ ಅಬ್ದುಲ್ ಬಶೀರ್ ಶೇಖ್ ಅವರ ಹೆಸರನ್ನು ಉವೈಸಿ ಅವರು ಅಧಿಕೃತವಾಗಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
AIMIM ರಾಜ್ಯಾಧ್ಯಕ್ಷ ಸಬೀರ್ ಕಬ್ಲಿವಾಲಾ ಅವರು ಅಹಮದಾಬಾದ್ ನ ಜಮಾಲ್ ಪುರ್ ಖಾದಿಯಾ ಕ್ಷೇತ್ರ, ದಲಿತ ಮುಖಂಡ ಕೌಶಿಕಾ ಪರ್ಮಾರ್ ಅವರು ಡ್ಯಾನಿಲಿಮ್ಡಾ ಕ್ಷೇತ್ರ ಮತ್ತು ವಾಸೀಮ್ ಖುರೇಷಿ ಅವರು ಸೂರತ್ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.