ರೋಹಿತ್‌ ಶರ್ಮಾಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ 11ರ ಹರೆಯದ ಬಾಲಕ

Prasthutha|

ಪರ್ತ್‌: ​​​​​​​ಟಿ20 ವಿಶ್ವಕಪ್‌ ಟೂರ್ನಿಗಾಗಿ ಆಸ್ಟೇಲಿಯ ತಲುಪಿರುವ ಟೀಮ್‌ ಇಂಡಿಯಾ, ಈಗಾಗಲೇ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದು, ತಲಾ ಒಂದು ಪಂದ್ಯದಲ್ಲಿ ಗೆಲುವು-ಸೋಲು ಕಂಡಿದೆ.

- Advertisement -

ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ  ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಮೊದಲ ಅಭ್ಯಾಸ ಪಂದ್ಯ ಬ್ರಿಸ್ಬೇನ್‌ನಲ್ಲಿ ಸೋಮವಾರ ನಡೆಯಲಿದೆ.

ವಿಶ್ವಕಪ್‌ ಟೂರ್ನಿಗಾಗಿ ಟೀಮ್‌ ಇಂಡಿಯಾ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಈ ನಡುವೆ ಪರ್ತ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದ ವೇಳೆ ಬಾಲಕನೊಬ್ಬ ಟೀಮ್‌ ಇಂಡಿಯಾ ನಾಯಕನಿಗೆ ಬೌಲಿಂಗ್‌ ಮಾಡಿ ಗಮನ ಸೆಳೆದಿದ್ದಾನೆ.

- Advertisement -

ಟೀಂ ಇಂಡಿಯಾ ವಾಕಾ ಮೈದಾನದಕ್ಕೆ ಅಭ್ಯಾಸ ನಡೆಸಲು ಆಗಮಿಸಿದ್ದ ವೇಳೆ ಅಲ್ಲಿ ನೂರಾರು ಮಕ್ಕಳು ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ  ಅಲ್ಲಿ ಬೌಲಿಂಗ್‌ ಮಾಡುತ್ತಿದ್ದ 11 ವರ್ಷದ ಬಾಲಕ ದೃಶಿಲ್ ಚೌಹಾಣ್ ಟೀಂ ಇಂಡಿಯಾ ಆಟಗಾರರ ಗಮನ ಸೆಳೆದಿದ್ದಾನೆ. ದೃಶಿಲ್ ಬೌಲಿಂಗ್ ಕೌಶಲ್ಯದಿಂದ ಪ್ರಭಾವಿತರಾದ ರೋಹಿತ್ ಶರ್ಮಾ, ಡ್ರೆಸ್ಸಿಂಗ್ ರೂಮ್ ನಿಂದ ಹೊರಬಂದು, ತನಗೆ ಬೌಲಿಂಗ್‌ ಮಾಡುವಂತೆ ಬಾಲಕನ ಬಳಿ ಹೇಳಿದ್ದಾರೆ.  ಅದರಂತೆ, ದೃಶೀಲ್‌  ನೆಟ್ಸ್‌ನಲ್ಲಿ ಟೀಂ ಇಂಡಿಯಾ ನಾಯಕನಿಗೆ ಬೌಲಿಂಗ್ ಮಾಡಿ ಖುಷಿ ಪಟ್ಟಿದ್ದಾನೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, 11 ವರ್ಷದ ಎಡಗೈ ಬೌಲರ್ ಭಾರತೀಯ ನಾಯಕನೊಂದಿಗಿನ ತನ್ನ ಭೇಟಿಯ ಕುರಿತು ಮಾತನಾಡಿದ್ದಾರೆ. ಬಾಲಕ ತನಗೆ ಇನ್‌ಸ್ವಿಂಗ್ ಯಾರ್ಕರ್ ಮತ್ತು ಔಟ್‌ಸ್ವಿಂಗರ್ ಬೌಲ್ ಮಾಡುವುದು ಇಷ್ಟ ಎಂದು ಹೇಳಿದ್ದಾರೆ.

,”ರೋಹಿತ್ ಶರ್ಮಾ ನನ್ನನ್ನು ನೋಡಿದರು ಮತ್ತು ಅವರು ನನಗೆ ಬೌಲಿಂಗ್ ಮಾಡಲು ಹೇಳಿದರು. ತುಂಬಾ ಆಶ್ಚರ್ಯವಾಯಿತು, ನಾನು ತುಂಬಾ ಉತ್ಸುಕನಾಗಿದ್ದೆ. ನನ್ನ ನೆಚ್ಚಿನ ಚೆಂಡು ಸ್ವಿಂಗ್ ಯಾರ್ಕರ್‌” ಎಂದರು.

ನೆಟ್ಸ್ ನಲ್ಲಿ ಬೌಲಿಂಗ್ ಮಾಡುವ ವೇಲೆ “ ನೀನು ಪರ್ತ್ ನಲ್ಲಿದ್ದೀಯ, ಹೇಗೆ ಭಾರತ ತಂಡಕ್ಕೆ ಆಡುತ್ತೀಯಾ?” ಎಂದು ರೋಹಿತ್ ಕೇಳಿದರು. ಅದಕ್ಕುತ್ತಿರಿಸಿದ ದೃಶಿಲ್, “ ನಾನು ಭಾರತಕ್ಕೆ ಹೋಗುತ್ತೇನೆ, ಆದರೆ ನಾನು ಸಾಕಷ್ಟು ಒಳ್ಳೆಯ ಆಟಗಾರನಾಗುತ್ತೇನೆಯೇ ಎಂದು ನನಗೆ ತಿಳಿದಿಲ್ಲ” ಎಂದರು.

ದೃಶಿಲ್ ಚೌಹಾನ್ ಬೌಲಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಲು ಬ್ರಿಸ್ಬೇನ್ ಆಗಮಿಸುವಂತೆ ಆಹ್ವಾನ ನೀಡಿದರು. ನೆಟ್ಸ್‌ನಲ್ಲಿ ದೃಶಿಲ್‌ನ ಕೆಲವು ಎಸೆತಗಳನ್ನು ಎದುರಿಸಿದ ರೋಹಿತ್ ಆತನ ಬೌಲಿಂಗ್ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ.



Join Whatsapp