ಉಳ್ಳಾಲ‌|ಮುಹಿಯ್ಯಾ ಶರೀಯತ್ ಕಾಲೇಜಿನ ಸನದು ಪ್ರದಾನ

Prasthutha|

ಉಳ್ಳಾಲ‌: ಸ್ಥಳೀಯರೇ ಧಾರ್ಮಿಕ ಶಿಕ್ಷಣ ಪಡೆಯಲು ಮುಂದೆ ಬಂದರೆ ಇಲ್ಲಿಂದಲೇ ವಿದ್ವಾಂಸರ ಸೃಷ್ಟಿ ಸಾಧ್ಯ, ತಾವು ಕಲಿತವರು ಎನ್ನುವ ಅಹಂಭಾವದಿಂದ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಉಳ್ಳಾಲ‌ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.‌

- Advertisement -

ಉಳ್ಳಾಲ‌ ಮೇಲಂಗಡಿ ಜುಮ್ಮಾ ಮಸೀದಿ ಆಶ್ರಯದಲ್ಲಿ ಭಾನುವಾರ ಮಸೀದಿಯ ವಠಾರದಲ್ಲಿ ನಡೆದ ಮುಹಿಯ್ಯಾ ಶರೀಯತ್ ಕಾಲೇಜಿನ ಸನದು ದಾನಮತ್ತು ಮೀಲಾದ್ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೇಲಂಗಡಿ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಶರೀಯತ್ ಶಿಕ್ಷಣ ನಾಲ್ಕು ವರ್ಷಗಳದ್ದಾಗಿದ್ದರೂ ಕೊರೊನಾ ಕಾರಣದಿಂದಾಗಿ ಒಂದು ವರ್ಷ ವಿಳಂಬವಾಗಿದ್ದು ಐದು ವರ್ಷ ಬಳಿಕ ಸನದು ನೀಡಲಾಗುತ್ತಿದೆ ಎಂದು ತಿಳಿಸಿದರು.

- Advertisement -

ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿ, ಶರೀಯತ್ ಶಿಕ್ಷಣ ಪಡೆದ ಬಳಿಕ ಧಾರ್ಮಿಕ ಚೌಕಟ್ಟಿನಲ್ಲಿ ನಡೆದು ಇತರಿಗೂ ಅಕ್ಷರ ಜ್ಞಾನ ನೀಡಿದರೆ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.

ಮುಹಿಯ್ಯಾ ಶರೀಯತ್ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ ಉಸ್ತಾದ್ ಉದ್ಘಾಟಿಸಿದರು. ಮಸೀದಿಯ ಖತೀಬ್ ಮುಹಮ್ಮದ್ ಅಲಿ ಮದನಿ ದುವಾ ನೆರವೇರಿಸಿದರು. ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಮಾತನಾಡಿದರು.

ಮಸೀದಿಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ರಶೀದ್ ಮಹಮ್ಮದ್, ಕಬೀರ್ ಬುಖಾರಿ, ಮಾಲಿಕ್ ಹಮೀದ್ ಉಪಸ್ಥಿತರಿದ್ದರು.

ಮೇಲಂಗಡಿ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ‌ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿದರು.



Join Whatsapp