ಮುಂಬೈ: ಪ್ರೊ. ಜಿ. ಎನ್.ಸಾಯಿಬಾಬಾ ಅವರನ್ನು ನಕ್ಸಲ್ ನಂಟು ಪ್ರಕರಣದಲ್ಲಿ ಖುಲಾಸೆಗೊಳಿಸಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಸುಪ್ರೀಂ ನಲ್ಲಿ ತುರ್ತು ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆಗೆ ಸುಪ್ರೀಂ ಅಸ್ತು ಎಂದಿದೆ.
ಆದರೆ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಿರಾಕರಿಸಿದೆ. ಆದರೆ ಮೆಲ್ಮನವಿ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.
ಜಸ್ಟೀಸ್ ಶಾ ಮತ್ತು ಜಸ್ಟೀಸ್ ಬೇಲಾ ತ್ರಿವೇದಿ ಅವರಿರುವ ದ್ವಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ.
UAPA ಹೇರಲು ಸರಿಯಾದ ವಿಧಾನ ಅನುಸರಿಸಿಲ್ಲ ಎಂಬ ಬಗ್ಗೆ ಆರೋಪಿಯೂ ನಿರ್ದಿಷ್ಟ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲವಾದ್ದರಿಂದ ಅದು ಅವರ ಮೇಲಿನ ಪ್ರಕರಣ ರದ್ದಿಗೆ ಕಾರಣವಾಗಬಾರದು ಎಂಬುದನ್ನು ಒಳಗೊಂಡಂತೆ ಹತ್ತು ಆಕ್ಷೇಪಣೆಗಳು ಸರ್ಕಾರ ಅರ್ಜಿಯಲ್ಲಿ ತಿಳಿಸಿದೆ.
ಶನಿವಾರ ಬೆಳಿಗ್ಗೆ 11 ಗಂಟೆಗೆ ಸುಪ್ರೀಂ ನಲ್ಲಿ ವಿಚಾರಣೆ ನಡೆಯಲಿದೆ.
ಪ್ರೊ.ಸಾಯಿಬಾಬಾ ಖುಲಾಸೆ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮಹಾರಾಷ್ಟ್ರ ಸರ್ಕಾರ
Prasthutha|