ಬೆಂಗಳೂರು: ಕನ್ನಡಿಗರು ಮತ್ತು ಕನ್ನಡದ ಮೇಲೆ ದಾಳಿ ನಡೆಸಿದರೆ ಬಿಜೆಪಿ ಮತ್ತು ಆರ್ಎಸ್ಎಸ್ ಕಾಂಗ್ರೆಸ್ ನಿಂದ ಸಂಪೂರ್ಣ ಬಲಪ್ರಯೊಗ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ನಿರುದ್ಯೋಗಿ ಯುವಕರು ತಮ್ಮ ಪರೀಕ್ಷೆಗಳನ್ನು ಕನ್ನಡದಲ್ಲಿ ಏಕೆ ಬರೆಯಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಜನರು ತಮ್ಮ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು, ಏಕೆಂದರೆ, ಒಂದು ಭಾಷೆಯ ಇತಿಹಾಸ, ಸಂಸ್ಕೃತಿ, ಅದರ ಕಲ್ಪನೆ ಮತ್ತು ಜನರು ತಮ್ಮ ಭಾಷೆಯಲ್ಲಿ ಮಾತನಾಡುವುದನ್ನು ತಡೆಯಲು ಯಾರಿಗೂ ಅವಕಾಶ ನೀಡಬಾರದು ಎಂದು ಹೇಳಿದರು.
ಕನ್ನಡವು ದ್ವಿತೀಯ ಭಾಷೆಯನ್ನಾಗಿ ಮಾಡಿ, ಅದನ್ನು ಗೌರವಿಸಬಾರದು ಎಂಬುದು ಬಿಜೆಪಿ ಮತ್ತು ಆರ್ಎಸ್ಎಸ್ ಉತ್ತೇಜಿಸುತ್ತಿರುವ ಕೆಲವು ವಿಚಾರಗಳಾಗಿವೆ. ಕನ್ನಡದ ಮೇಲೆ ದಾಳಿ ಮಾಡುವವರು ಖಂಡಿತಾ ನಾಳೆ ಕನ್ನಡಿಗರ ಮೇಲೂ ದಾಲಳಿ ಮಾಡಬಹುದು. ಕರ್ನಾಟಕದ ಮೇಲೂ, ಕರ್ನಾಟಕದ ಇತಿಹಾಸದ ಮೇಲೂ ದಾಳಿ ಮಾಡಬಹುದು. ಹಾಗೆ ಮಾಡಿದರೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಮತ್ತು ಆರ್ಎಸ್ಎಸ್ ಸಂಪೂರ್ಣ ಬಲಪ್ರಯೋಗ ಎದುರಿಸಬೇಕಾಗುತ್ತದೆ ಎಂದು ರಾಹುಲ್ ಹೇಳಿದರು.
ಕರ್ನಾಟಕದ ಜನರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂದು ಯಾರೂ ನಿರ್ದೇಶಿಸಲು ಸಾಧ್ಯವಿಲ್ಲ, ಮತ್ತು ಅವರ ಮಕ್ಕಳು ಯಾವ ಭಾಷೆಯಲ್ಲಿ ಪರೀಕ್ಷೆಗಳನ್ನು ಬರೆಯಬಹುದು ಎಂದು ರಾಜ್ಯದ ಜನರಿಗೆ ಯಾರೂ ಹೇಳಬೇಕಾಗಿಲ್ಲ ಕರ್ನಾಟಕದ ಜನರು ಕನ್ನಡ ಮಾತನಾಡಲು ಬಯಸಿದರೆ, ತಮಿಳುನಾಡಿನ ಜನರು ತಮಿಳು ಮಾತನಾಡಲು ಬಯಸಿದರೆ ಮತ್ತು ಕೇರಳದ ಜನರು ಮಲಯಾಳಂ ಮಾತನಾಡಲು ಬಯಸಿದರೆ ಅವರಿಗೆ ಅದನ್ನು ಮಾಡಲು ಅವಕಾಶ ನೀಡಬೇಕು. ದೇಶದಲ್ಲಿ ಕಳೆದ 45 ವರ್ಷಗಳಲ್ಲಿ ನಿರುದ್ಯೋಗವು ಏಕೆ ಅತ್ಯಧಿಕವಾಗಿದೆ ಎಂದು ರಾಹುಲ್ ಗಾಂಧಿ ಕೇಂದ್ರದ ಎನ್ಡಿಎ ಸರ್ಕಾರದಿಂದ ವಿವರಣೆ ಕೇಳಿದರು.