ನ್ಯಾ. ಸುಧಾಂಶು ಧುಲಿಯಾಗೆ ಧನ್ಯವಾದ ಅರ್ಪಿಸಿದ ಉಡುಪಿಯ ಹಿಜಾಬಿ, ಅಲಿಯಾ ಅಸ್ಸಾದಿ

Prasthutha|

ಉಡುಪಿ: ಹಿಜಾಬ್ ವಿದ್ಯಾರ್ಥಿನಿಯರ ಆಯ್ಕೆ ಎಂದು ತೀರ್ಪು ಹೊರಡಿಸಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ ಉಡುಪಿ ಶಾಲೆಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಈ ತೀರ್ಪು ಬಲಿಪಶುವಾದ ಹೆಣ್ಣುಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯಿತು ಎಂದು ಹೇಳಿದ್ದಾರೆ.

- Advertisement -

ಗೌರವಾನ್ವಿತ ನ್ಯಾಯಮೂರ್ತಿ ಧುಲಿಯಾ ಅವರ ಹೇಳಿಕೆಯು ನ್ಯಾಯೋಚಿತ ತೀರ್ಪಿನಲ್ಲಿ ನಮ್ಮ ಭರವಸೆಯನ್ನು ಮತ್ತಷ್ಟು ಬಲಪಡಿಸಿದೆ ಮತ್ತು ಕನಿಷ್ಠ ಸಾಂವಿಧಾನಿಕ ಮೌಲ್ಯವನ್ನು ಮುಂದುವರಿಸಿದೆ. ಸಾವಿರಾರು ಹಿಜಾಬಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪುನರಾರಂಭಿಸಲು ಕಾಯುತ್ತಿದ್ದಾರೆ. ತವಕ್ಕಲ್ತು ಅಲ್ಅಲ್ಲಾಹ್ ಎಂದು ಅಲಿಯಾ ಟ್ವೀಟ್ ಮಾಡಿದ್ದಾರೆ.

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಜಾಬ್ ನಿರ್ಬಂಧ ಕುರಿತು ಸರ್ಕಾರದ ಆದೇಶವನ್ನು ವಜಾಗೊಳಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ತೀರ್ಪು ನೀಡಿದ್ದರು. ಧಾರ್ಮಿಕ ಹಕ್ಕು ಮತ್ತು ಆಯ್ಕೆ ಸ್ವಾತಂತ್ರ್ಯದ ವಿಷಯದಲ್ಲಿ ಹೈಕೋರ್ಟ್ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಜಾಬ್ ಎಂಬುದು ವಿದ್ಯಾರ್ಥಿನಿಯರ ಆಯ್ಕೆ ಪ್ರಶ್ನೆಯಾಗಿದೆ ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹೇಳಿದ್ದರು



Join Whatsapp