ಕಲ್ಲಡ್ಕ: ರಸ್ತೆಗೆ ಕುಸಿದುಬಿದ್ದ ಕಾಮಾಗಾರಿಯ ಕಬ್ಬಿಣ: ಪಿಲ್ಲರ್ 40% ಕಮಿಷನತ್ತ ಬಾಗಿದೆ ಎಂದ ನೆಟ್ಟಿಗರು

Prasthutha|

ಬಂಟ್ವಾಳ: ಬಿ.ಸಿ.ರೋಡ್ – ಹಾಸನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ ಕಲ್ಲಡ್ಕದಲ್ಲಿ ಮೇಲ್ಸೆತುವೆಯ ಪಿಲ್ಲರ್ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದ್ದು , ನೆಟ್ಟಿಗರು ಪಿಲ್ಲರ್ 40% ಕಮಿಷನತ್ತ ಬಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

- Advertisement -

ಫೈ ಓವರ್ ಗಾಗಿ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪಿಲ್ಲರ್ ನಿರ್ಮಾಣಕ್ಕಾಗಿ ಕಬ್ಬಿಣದ ರಾಡ್ ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಜೋಡಿಸಿದ್ದ ಕಬ್ಬಿಣದ ರಾಡ್ ಗಳು ಸಂಪೂರ್ಣವಾಗಿ ರಸ್ತೆಗೆ ಕುಸಿದು ಬಿದ್ದಿದೆ. ಬೀಳುವ ಸಂದರ್ಭದಲ್ಲಿ ಸ್ಥಳದಲ್ಲಿ ಯಾವುದೇ ವಾಹನಗಳ ಸಂಚಾರ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ


ಕೆಲವು ತಿಂಗಳಿನಿಂದ ಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಆರಂಭದಿಂದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಟ್ರಾಫಿಕ್ ಜಾಮ್, ಧೂಳು ಸಹಿತ ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದು, ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದೀಗ ಪಿಲ್ಲರ್ ನಿರ್ಮಾಣದ ಕಬ್ಬಿಣ ಸಂಪೂರ್ಣವಾಗಿ ರಸ್ತೆಗೆ ಕುಸಿದುಬಿದ್ದಿದ್ದು ಕಳಪೆ ಕಾಮಗಾರಿ ಮತ್ತು 40% ಕಮಿಷನ್ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Join Whatsapp