ದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷಗಿರಿಗೆ (ಎಐಸಿಸಿ) ಇಬ್ಬರು ಬಲಿಷ್ಠ ನಾಯಕರು ಸ್ಪರ್ಧಿಸಿದ್ದು, ಇಬ್ಬರ ನಡುವೆ ದಿನದಿಂದ ದಿನಕ್ಕೆ ಒಂದಲ್ಲ ಒಂದು ಸಹಜ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಸ್ಪರ್ಧಾಳುಗಳಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಒಬ್ಬರಾದರೆ ಇನ್ನೊಬ್ಬರು ಚಿಂತಕ ಶಶಿ ತರೂರ್ ಆಗಿದ್ದಾರೆ. ‘ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ಕೆಲವು ನಾಯಕರು ಬಹಿರಂಗವಾಗಿಯೇ ಬೆಂಬಲವನ್ನು ಸೂಚಿಸುತ್ತಿದ್ದಾರೆ’ ಎಂದು ಪ್ರತಿಸ್ಪರ್ಧಿ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನ್ನೊಂದಿಗಿನ ಸಭೆಗೆ ಕೆಲವು ನಾಯಕರು ಗೈರು ಹಾಜರಾಗುತ್ತಾರೆ. ಆದರೆ ಖರ್ಗೆಯ ಭೇಟಿಯ ಸಂದರ್ಭದಲ್ಲಿ ಸ್ವಾಗತಿಸಲು ಹಲವು ನಾಯಕರು ಜೊತೆ ಸೇರುತ್ತಾರೆ’ ಎಂದು ಹೇಳಿದ್ದಾರೆ.
‘ಅಧ್ಯಕ್ಷನಾದರೆ ಪಕ್ಷದಲ್ಲಿ ನೈಜ ಸಾಂವಿಧಾನಿಕ ರೂಪದ ಶಿಷ್ಟಾಚಾರವನ್ನು ಬಲಪಡಿಸುವ ಉದ್ದೇಶ ಹೊಂದಿದ್ದೇನೆ’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ