ಛತ್ತೀಸ್’ಗಢದಲ್ಲಿ ED ದಾಳಿ ; ಬಿಜೆಪಿ ಬೆದರಿಕೆಗೆ ಜಗ್ಗುವುದಿಲ್ಲ ಎಂದ ಕಾಂಗ್ರೆಸ್

Prasthutha|

ರಾಯ್ ಪುರ: ಛತ್ತೀಸ್’ಗಢದ ವಿವಿಧ ಕಡೆಗಳಲ್ಲಿ ಆಡಳಿತರೂಢ ಕಾಂಗ್ರೆಸ್’ನ ಮುಖಂಡರು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ED ಪ್ರತ್ಯೇಕ ತಂಡಗಳು ರಾಜ್ಯದ ರಾಜಧಾನಿ ರಾಯ್’ಪುರ ಸೇರಿದಂತೆ ರಾಯ್’ಗಢ, ಮಹಾಸಮುಂಡ್, ಕೊರ್ಬಾ ಮತ್ತು ಇತರೆ ಜಿಲ್ಲೆಗಳಲ್ಲಿ ಬೆಳಿಗ್ಗೆ ದಾಳಿ ನಡೆಸಲು ಪ್ರಾರಂಭಿಸಿದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು, ಕೆಲವು ಹಿರಿಯ ಅಧಿಕಾರಿಗಳು, ಉದ್ಯಮಿಗಳು ಮತ್ತು ಆಡಳಿತ ಪಕ್ಷದ ರಾಜಕಾರಣಿಗಳ ಮೇಲೆ ED ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ED ದಾಳಿಯನ್ನು ವಿರೋಧಿಸಿರುವ ಛತ್ತೀಸ್’ಗಢದ ಕಾಂಗ್ರೆಸ್’ನ ಮಾಧ್ಯಮ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಅವರು ವಿರೋಧ ಪಕ್ಷವಾದ ಬಿಜೆಪಿ ರಾಜಕೀಯವಾಗಿ ತಮ್ಮನ್ನು ಎದುರಿಸಲು ಸಾಧ್ಯವಾಗದ ಕಾರಣ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಸಿಎಂ ಭೂಪೇಶ್ ಬಘೇಲ್ ಅವರು ಈ ಹಿಂದೆಯೇ ಹಲವು ಬಾರಿ ED ದಾಳಿ ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ ಶುಕ್ಲಾ, ಇದು ಖಂಡನೀಯ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷವು ಇಂತಹ ಬೆದರಿಕೆಗೆ ಜಗ್ಗುವುದಿಲ್ಲ. ನಾವು ಇದರ ವಿರುದ್ಧ ಹೋರಾಡುತ್ತೇವೆ ಮತ್ತು ಸಾರ್ವಜನಿಕರ ಎದುರು ಬಹಿರಂಗಪಡಿಸುತ್ತೇವೆ ಎಂದು ಶುಕ್ಲಾ ತಿಳಿಸಿದರು



Join Whatsapp