ಕೈರೋ: ಹಜ್ ಅಥವಾ ಉಮ್ರಾ ನಿರ್ವಹಿಸುವಾಗ ಮಹಿಳೆಯರೊಂದಿಗೆ ಹೋಗಲು ಮಹ್ರಂ (ವಿವಾಹ ಸಂಬಂಧ ನಿಷಿದ್ಧವಾದವರು) ಅಗತ್ಯವಿದೆಯೇ ಎಂಬ ವಿವಾದಕ್ಕೆ ಅಂತ್ಯ ಹಾಡಲಾಗಿದೆ ಎಂದು ಸೌದಿ ಸಚಿವ ಡಾ. ತೌಫಿಕ್ ಅಲ್ – ರಬಿಯಾ ತಿಳಿಸಿದ್ದಾರೆ.
ನಿನ್ನೆ ಕೈರೋದಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ವಿಶ್ವದ ಯಾವುದೇ ಭಾಗದ ಮಹಿಳೆಯರು ಮಹ್ರಂ (ವಿವಾಹ ಸಂಬಂಧ ನಿಷಿದ್ಧವಾದವರು) ಇಲ್ಲದೆ ಹಜ್ ಅಥವಾ ಉಮ್ರಾ ಮಾಡಬಹುದು ಎಂದು ಸ್ಪಷ್ಟಪಡಿಸಿದರು.
ಮಕ್ಕದಲ್ಲಿನ ಗ್ರ್ಯಾಂಡ್ ಮಸೀದಿಯ ವಿಸ್ತರಣೆಯ ವಿವರಗಳನ್ನು ನೀಡಿದ ಅವರು, ಇದು ಅತಿದೊಡ ವಿಸ್ತರಣೆಯಾಗಿದೆ. ಒಟ್ಟು 200 ಶತಕೋಟಿ ಸೌದಿ ರಿಯಾಲ್ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಉಮ್ರಾ ವೀಸಾಗಳ ಕುರಿತು ಮಾತನಾಡಿದ ಅವರು, ವೀಸಾಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಯಾವುದೇ ವೀಸಾದಲ್ಲಿ ಸೌದಿಗೆ ಬರುವ ವಿಶ್ವದ ಯಾವುದೇ ಭಾಗದಿಂದ ಮುಸ್ಲಿಮರು ಉಮ್ರಾ ನಿರ್ವಹಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.