ಕೋಮುಗಲಭೆ ನಡೆದರೆ ಪೊಲೀಸರು ಮೌನವಾಗಿರಬೇಕು: ಹಿಂದೂ ಪರಿಷತ್

Prasthutha|


ಹೊಸದಿಲ್ಲಿ: “ದೇಶದಲ್ಲಿ ಕೋಮುಗಲಭೆ ನಡೆದರೆ, ನಮ್ಮ ವಿರುದ್ಧ ತಿರುಗಿಬೀಳಬೇಡಿ” ಎಂದು ವಿಶ್ವ ಹಿಂದೂ ಪರಿಷತ್ ಜೊತೆ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -


ದೆಹಲಿಯಲ್ಲಿ ನಡೆದ ಜಾಥಾದಲ್ಲಿ ಮಾತನಾಡಿದ ಜೈನ್, ದೇಶದಲ್ಲಿ ಗಲಭೆಗಳು ಹೆಚ್ಚುತ್ತಿವೆ. ಏನಾದರೂ ಅಹಿತಕರ ಘಟನೆ ನಡೆದರೆ ನಮ್ಮನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಹಿಂದೂಗಳು ತಮ್ಮ ಉಳಿವಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಉಂಟಾದಲ್ಲಿ, ಕಾನೂನನ್ನು ಕೈಗೆತ್ತಿಕೊಳ್ಳಲಾಗುವುದು. ಜನರ ಪ್ರತಿರೋಧ ಯಾವ ರೀತಿ ಇರಬಹುದು ಎಂಬುದು ಜನರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಅಂತಹ ಸನ್ನಿವೇಶ ಉಂಟಾಗುವ ಮೊದಲು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿರಬೇಕು ಎಂದು ಜೈನ್ ಹೇಳಿದ್ದಾರೆ.
ಹಿಂದೂಗಳು ಸಂಘಟಿತರಾಗಬೇಕು. ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು ಎಂಬ ಹಿಂದುತ್ವ ಮುಖಂಡ ಮಹಂತ್ ನವಲ್ ಕಿಶೋರ್ ದಾಸ್ ಅವರ ಭಾಷಣದ ವೀಡಿಯೋ ವೈರಲ್ ಆಗಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮಹಂತ್ ನವಲ್ ಕಿಶೋರ್ ದಾಸ್, “ಬಂದೂಕುಗಳನ್ನು ತೆಗೆದುಕೊಳ್ಳುವಂತೆ ನಾನು ಹೇಳಲಿಲ್ಲ. ಎಲ್ಲರೂ ಒಟ್ಟಿಗೆ ಸೇರಬೇಕು ಎಂದು ಮಾತ್ರ ನಾನು ಹೇಳಿದ್ದೇನೆ. ಶಸ್ತ್ರಾಸ್ತ್ರ ಎಂದು ಹೇಳಿರುವುದರ ಉದ್ದೇಶ ಕಲ್ಲು ಅಥವಾ ಲಾಠಿ ಎಂದಾಗಿದೆ. ಅದೂ ಕೂಡ ದೇಶದ ನಂಬಿಕೆಯನ್ನು ರಕ್ಷಿಸಲು ಮಾತ್ರ. ಇದು ಆರು ವರ್ಷದ ಹುಡುಗನನ್ನು ಕೊಲ್ಲುವುದನ್ನು ನೋಡಿ ಆನಂದಿಸಿದ ನಾಡು. ನಾವು ಜಿಹಾದಿಗಳ ವಿರುದ್ಧ ಹೋರಾಡಬೇಕಾಗಿದೆ. ಆಗ ಮಾತ್ರ ದೇಶಕ್ಕೆ ಉಳಿಗಾಲ. ಆದ್ದರಿಂದ ನಿಮಗೆ ಅಗತ್ಯವಿದ್ದರೆ, ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪೊಲೀಸರೊಂದಿಗೆ ಕೆಲಸ ಮಾಡಿ ಎಂದು ತಿಳಿಸಿದ್ದೇನೆ” ಎಂದು ಹೇಳಿದರು.
ಇದೇ ರೀತಿಯ ವಾದದೊಂದಿಗೆ ಜಾಥಾದಲ್ಲಿ ಭಾಗವಹಿಸಿದ್ದ ಧಾರ್ಮಿಕ ಮುಖಂಡ ಜಗತ್ ಗುರು ಮಾತನಾಡಿ, ಹಿಂದೂಗಳು ಒಗ್ಗೂಡದಿದ್ದರೆ, ಜಿಹಾದಿಗಳು ಹಿಂದುತ್ವವಾದಿಗಳನ್ನು ಬೇಟೆಯಾಡಿ ಕೊಲ್ಲುತ್ತಾರೆ. ಆದ್ದರಿಂದ ಹಿಂದೂಗಳು ಒಗ್ಗೂಡಬೇಕು. ಅದಕ್ಕಾಗಿಯೇ ಹಿಂದೂಗಳನ್ನು ಸಂಘಟಿಸಲು ಹೇಳಲಾಗುತ್ತಿದೆ ಎಂದು ಹೇಳಿದರು.


ಯಾರಾದರೂ ಹಿಂದೂ ದೇವಾಲಯಗಳು, ಹಿಂದೂ ಮಹಿಳೆಯರು ಅಥವಾ ಕುಟುಂಬಗಳನ್ನು ಗುರಿಯಾಗಿಸಿಕೊಂಡಿರುವುದನ್ನು ನೀವು ಗಮನಿಸಿದರೆ, ಅವರ ಬೆರಳುಗಳನ್ನಲ್ಲ ಕೈಗಳನ್ನು ಕತ್ತರಿಸಿ. ಅಗತ್ಯವಿದ್ದರೆ ತಲೆಯನ್ನೂ ಕತ್ತರಿಸಿ. ಹೀಗೆ ಮಾಡಿದರೆ ಒಂದು ವೇಳೆ ನಿಮ್ಮಲ್ಲಿ ಒಂದಿಬ್ಬರನ್ನು ಗಲ್ಲಿಗೇರಿಸಬಹುದು. ಪರವಾಗಿಲ್ಲ . ಅದು ಕೇವಲ ಕಾನೂನು. ಹಿಂದೂಗಳನ್ನು ಕೊಲ್ಲುವ ಮುಸ್ಲಿಂ ತೀವ್ರಗಾಮಿಗಳನ್ನು ರಕ್ಷಿಸುವ ಕಾನೂನು. ಏಕೆಂದರೆ ಜಿಹಾದಿಗಳು ದೊಡ್ಡ ಒಂದು ಗುಂಪು. ಅವರು 14 ಜನರನ್ನು ಮದುವೆಯಾಗಿ ತಮ್ಮ ತಲೆಮಾರುಗಳನ್ನು ಸೃಷ್ಟಿಸುತ್ತಿದ್ದಾರೆ. ನಾವು ಮಾಡಬೇಕಾಗಿರುವುದು ಅವರನ್ನು ಕೊಲ್ಲುವ ಕೆಲಸ ಮಾತ್ರ’ ಎಂದು ಜಗತ್ ಗುರು ಹೇಳಿದರು.

- Advertisement -


ಆದರೆ ಸಾರ್ವಜನಿಕವಾಗಿ ನರಮೇಧದ ಕರೆಯನ್ನು ಮಾಡಿದ್ದಕ್ಕಾಗಿ ಮತ್ತು ಕಾನೂನನ್ನು ಪ್ರಶ್ನಿಸಿದ್ದಕ್ಕಾಗಿ VHP ನಾಯಕನ ವಿರುದ್ಧ ಪೊಲೀಸರು ಇನ್ನೂ ಪ್ರಕರಣ ದಾಖಲಿಸಲಿಲ್ಲ. ಈ ಭಾಷಣ ಮತ್ತು VHP ಯ ಆಕ್ರೋಶ ಜಾಥಾದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.



Join Whatsapp