ಸಿಜೆಐ ಲಲಿತ್ ಅವರ ಉತ್ತರಾಧಿಕಾರಿಯಾಗಿ ಚಂದ್ರಚೂಡ್

Prasthutha|

ನವದೆಹಲಿ: ಸುಪ್ರೀಮ್ ಕೋರ್ಟ್’ನ ಹಾಲಿ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

- Advertisement -

  ನವೆಂಬರ್ 8 ಎಂದರೆ ಒಟ್ಟು 74 ದಿನಗಳ ಸೇವೆಯ ಬಳಿಕ ಕಡಿಮೆ ಅವಧಿಯಲ್ಲೇ ಯು. ಯು. ಲಲಿತ್ ನಿವೃತ್ತರಾಗುತ್ತಿದ್ದಾರೆ.

ಅಕ್ಟೋಬರ್ 11ರ ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ಎಲ್ಲರ ಸಮ್ಮುಖದಲ್ಲಿ ನ್ಯಾಯಾಧೀಶ ಚಂದ್ರಚೂಡರ ಹೆಸರನ್ನು 50ನೇ ಸಿಜೆಐ ಆಗಲು ಶಿಫಾರಸು ಮಾಡಲಾಯಿತು.

- Advertisement -

ಅವರು ಸಿಜೆಐ ಆಗಿ ಎರಡು ವರ್ಷ ಎಂದರೆ 2024ರ ನವೆಂಬರ್ 10ರವರೆಗೆ ಅಧಿಕಾರದಲ್ಲಿ ಇರಲು ಅವಕಾಶವಿದೆ. ಜಸ್ಟಿಸ್ ಚಂದ್ರಚೂಡ್ ಅವರ ಹೆಸರು ಶಿಫಾರಸು ಮಾಡಿ ಸಿಜೆಐ ಯು. ಯು. ಲಲಿತ್ ಅವರು ಇಂದು ಕೇಂದ್ರ ಸರಕಾರಕ್ಕೆ ಪತ್ರ ರವಾನಿಸಿದರು.

ಈಗಿನ ಸುಪ್ರೀಂ ಕೋರ್ಟ್ ಜಡ್ಜ್ ಗಳಲ್ಲಿ ಅತಿ ಹಿರಿಯರಾದ ಚಂದ್ರಚೂಡರನ್ನೇ ಸಿಜೆಐ ಲಲಿತ್ ಹೆಸರಿಸಿದ್ದಾರೆ. ಸಿಜೆಐ ನಿವೃತ್ತರಾಗುವುದಕ್ಕೆ ಒಂದು ತಿಂಗಳು ಮೊದಲು ಮುಂದಿನ ಸಿಜೆಐ ಸೂಚಿಸುವಂತೆ ಕೇಂದ್ರ ಸರಕಾರ ಕೇಳುವುದು, ಮುಖ್ಯ ನ್ಯಾಯಾಧೀಶರು ಸೂಚಿಸುವುದು ಕಾರ್ಯಸೂಚಿಯಾಗಿದೆ.

ಅಕ್ಟೋಬರ್ 7ರಂದು ಕಾನೂನು ಮತ್ತು ನ್ಯಾಯಾಲಯ ಮಂತ್ರಿ ಕಿರಣ್ ರಿಜಿಜು ಅವರು ಮುಂದಿನ ಸಿಜೆಐ ಹೆಸರು ಶಿಫಾರಸು ಮಾಡುವಂತೆ ಈಗಿನ ಸಿಜೆಐ ಉದಯ್ ಉಮೇಶ್ ಲಲಿತ್ ರಿಗೆ ಪತ್ರ ರವಾನಿಸಿದ್ದರು. ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಜಸ್ಟಿಸ್ ಚಂದ್ರಚೂಡರ ಹೆಸರು ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ.

Join Whatsapp