ರಾಜ್ಯ ಬಿಜೆಪಿ ಸರ್ಕಾರದ ಮಹತ್ವದ ಸಂಪುಟ ಸಭೆಯು ಇಂದು ಕೊನೆಗೊಂಡಿದ್ದು, ಪಕ್ಷವನ್ನು ನಿಷೇಧಿಸಬೇಕೆಂದು ಎದ್ದಿದ್ದ ಹುಯಿಲಿಗೆ ಅಂತಿಮ ತೆರೆ ಬಿದ್ದಿದೆ. ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಂತೆ ಎಸ್ಡಿಪಿಐಯನ್ನು ನಿಷೇಧಿಸುವ ತೀರ್ಮಾನ ಮಾಡಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
ಸರ್ಕಾರದ ಮಹತ್ವದ ಸಂಪುಟ ಸಭೆಯ ನಂತರ ಹೇಳಿಕೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ” SDPI ನಿಷೇಧದ ಬಗ್ಗೆ ಇಂದು ಅಂತಿಮ ನಿರ್ದಾರಕ್ಕೆ ಬಂದಿಲ್ಲ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿಗಳನ್ನು ತರಿಸಿಕೊಳ್ಳುತ್ತೇವೆ. ಮಾಹಿತಿ ಬಂದ ನಿಷೇಧದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದವರು ಹೇಳಿದ್ದಾರೆ.
ಬೆಂಗಳೂರು ಗಲಭೆಯನ್ನು ಮುಂದಿರಿಸಿಕೊಂಡು, ಅದಕ್ಕೆ ಕಾರಣಕರ್ತರು SDPI ಪಕ್ಷ ಎಂಬಂತೆ ಇಡೀ ರಾಜ್ಯದಾದ್ಯಂತ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸಿ, SDPI ಕಾರ್ಯಕರ್ತರನ್ನೇ ಮಾಧ್ಯಮ ಟ್ರಯಲ್ ನಡೆಸಿ ಅವರನ್ನು ಅಪರಾಧಿಗಳು ಎಂಬಂತೆ ಬಿಂಬಿಸಲಾಗಿತ್ತು. ಆದರೆ ಇದೂ ಕೂಡಾ ಈ ಹಿಂದಿನಂತೆ ಬಿಜೆಪಿಯ ಹಾಗೂ ಮಾಧ್ಯಮಗಳ ಪ್ರಾಯೋಜಿತ ಷಡ್ಯಂತ್ರ ಎನ್ನುವುದು ಮತ್ತೊಮ್ಮೆ ಸಾಬೀತಾದಂತಾಗಿದೆ. ರಾಜ್ಯ ಸರ್ಕಾರ SDPI ನಿಷೇಧದ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ ಎನ್ನುವುದಕ್ಕಿಂತ ಬೆಂಗಳೂರು ಗಲಭೆಯಲ್ಲಿ SDPI ಪಾತ್ರ ಶೂನ್ಯ ಹಾಗೂ ಗಲಭೆಯಲ್ಲಿ ಪಕ್ಷದ ಪಾತ್ರ ಇತ್ತು ಎನ್ನುವುದನ್ನು ನಿರೂಪಿಸುವ ಯಾವುದೇ ಸಾಕ್ಷ್ಯವೂ ಬಿಜೆಪಿ ಸರ್ಕಾರಕ್ಕೆ ದೊರೆತಿಲ್ಲ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಈ ಹಿಂದೆಯೂ SDPI ವಿರುದ್ಧ ಬಿಜೆಪಿ ಹಾಗೂ ಮಾಧ್ಯಮಗಳು ಇಂತಹದ್ದೇ ಕಟ್ಟುಕಥೆಗಳ, ಊಹಾಪೋಹಗಳ ಆಧಾರಗಳ ಸುದ್ದಿಗಳನ್ನು ಪ್ರಕಟಿಸಿ, ಸಾಕ್ಷಿ ಸಮೇತ ನಿರೂಪಿಸುವಲ್ಲಿ ವಿಫಲರಾಗಿ ನಗೆಪಾಟಲಿಗೀಡಾಗಿದ್ದವು.