ಹಜ್ ನೆನಪುಗಳನ್ನು ಸ್ಮರಿಸಿಕೊಂಡ ಭಾರತದ ಮಾಜಿ ರಾಯಭಾರಿಗಳು

Prasthutha|

IFF ಜಿದ್ದಾದಿಂದ ಜಾಗತಿಕ ವೆಬ್ ಮೀಟಿಂಗ್

- Advertisement -

ಜಿದ್ದಾ (ಸೌದಿ ಅರೇಬಿಯಾ): ಸೌದಿ ಸರಕಾರ ಪವಿತ್ರ ತಾಣದಲ್ಲಿ ಹೊಸ ವ್ಯವಸ್ಥೆಗಳನ್ನು ಅಳವಡಿಸಿದ್ದುದರಿಂದ 2008ರ ಹಜ್ ತುಂಬಾ ಸವಾಲಿನದ್ದಾಗಿತ್ತು ಮತ್ತು ಮಿನಾ ಮತ್ತು ಮುಜ್ದಲಿಫಾದಲ್ಲಿನ ವ್ಯವಸ್ಥೆಗಳ ಬಗ್ಗೆ ಯಾತ್ರಾರ್ಥಿಗಳಿಗೆ ಜಾಗೃತಿ ಮೂಡಿಸುವಲ್ಲಿ ಇಂಡಿಯನ್ ಫ್ರೆಟರ್ನಿಟಿ ಫಾರಂ (IFF) ಕಾರ್ಯಕರ್ತರ ಪಾತ್ರ ಮರೆಯಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಪ್ರಧಾನ ರಾಯಭಾರಿ ಎಚ್. ಇ. ಸಯೀದ್ ಅಹ್ಮದ್ ಬಾಬಾ ಹೇಳಿದ್ದಾರೆ.

IFF ಜಿದ್ದಾ ವತಿಯಿಂದ ಆಯೋಜಿಸಿದ ಜಾಗತಿಕ ವೆಬ್ ಮೀಟಿಂಗ್ ನಲ್ಲಿ ಮಾತನಾಡುತ್ತಾ, ಅವರು ತಮ್ಮ ಅವಧಿಯ ಹಜ್ ನೆನಪುಗಳನ್ನು ಹಂಚಿಕೊಂಡರು.

- Advertisement -

ಇನ್ನೋರ್ವ ಮಾಜಿ ಪ್ರಧಾನ ರಾಯಭಾರಿ ಎಚ್. ಇ. ಫಾಯಿಜ್ ಅಹ್ಮದ್ ಕಿದ್ವಾಯಿ ಮಾತನಾಡುತ್ತಾ, ಜೆದ್ದಾದಲ್ಲಿನ ತಮ್ಮ ಅವಧಿ 2011-2014ರ ನಡುವಿನ ನೆನಪುಗಳು ಸುಂದರವಾಗಿತ್ತು. ಹಜ್ ಕಾರ್ಯಕರ್ತರ ಕಾರ್ಯಗಳು ಕೇವಲ ಸೇವಾ ಚಟುವಟಿಕೆಗಳಾಗಿರಲಿಲ್ಲ, ಅದು ದೊಡ್ಡ ನಿರ್ವಹಣಾ ಅಭ್ಯಾಸವೂ ಆಗಿತ್ತು. ಆ ಕ್ಷೇತ್ರದಲ್ಲಿ IFF ತೆಗೆದುಕೊಂಡ ಆ ಸಂದರ್ಭಕ್ಕೆ ಸೂಕ್ತವಾದ ನಿರ್ಧಾರಗಳು ಮತ್ತು ಅದನ್ನು ಕಾರ್ಯರೂಪಕ್ಕೆ ತಂದ ಬಗೆಯು ಅದ್ಭುತವಾಗಿತ್ತು ಎಂದು ನೆನಪಿಸಿಕೊಂಡರು.

ಉಪ ಪ್ರಧಾನ ರಾಯಭಾರಿ ವೈ. ಶಬೀರ್ ಮೀಟಿಂಗ್ ಉದ್ಘಾಟಿಸಿದರು. ಮುಂಬರುವ ವರ್ಷಗಳಲ್ಲಿ ವೇದಿಕೆಯ ಕಾರ್ಯಕರ್ತರಿಗೆ ಸೇವೆ ಸಲ್ಲಿಸಲು ಇನ್ನಷ್ಟು ಹುರುಪು ಬರಲಿ ಎಂದು ಅವರು ಹಾರೈಸಿದರು. IFF ಸೌದಿ ವಲಯ ಅಧ್ಯಕ್ಷ ಮೂಸಕುಟ್ಟಿ ವೆಬ್ ಮೀಟಿಂಗ್ ನ ಅಧ್ಯಕ್ಷತೆ ವಹಿಸಿದ್ದರು.

IFF ಅಧ್ಯಕ್ಷ ಅಯೂಬ್ ಹಕೀಮ್, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಖಾದಿರ್ ಖಾನ್, ಮುಹಮ್ಮದ್ ಅಬ್ದುಲ್ ಅಜೀಜ್ ಕಿದ್ವಾಯಿ, ಝಕಾರಿಯಾ ಬಿಲಾದಿ, ಖಮರ್ ಸಾದಾ, ಅಶ್ರಫ್ ಮೊರಯುರ್, ಅಬ್ಬಾಸ್ ಚೆಮ್ಬನ್, ಸಲಾ ಕಾರಾತನ್, ಶಮೀಮ್ ಕೌಸರ್, ನೂರುದ್ದೀನ್ ಖಾನ್, ಬಶೀರ್ ಎಂಗಪುಝ, ಅಬ್ದುಲ್ ಸಲಾಂ ಮಾಸ್ಟರ್, ಅಬ್ದುಲ್ ಘನಿ, ಡಬ್ಲ್ಯೂ.ಎಫ್.ಎಫ್. ಅಧ್ಯಕ್ಷೆ ಅಸ್ಮಾ ಇಕ್ಬಾಲ್ ಮುಂತಾದವರು ಮಾತನಾಡಿದರು.

IFF ವಲಯ ಕಾರ್ಯದರ್ಶಿ ಶಂಶುದ್ದೀನ್ ಮಲಪ್ಪುರಂ ಹಜ್ ಸೇವೆಯ ಕುರಿತು ವಿವರಿಸುವ ವಿಡಿಯೋ ಪ್ರದರ್ಶಿಸಿದರು. ಜೆದ್ದಾ ವಲಯ ಅಧ್ಯಕ್ಷ ಫಯಾಝುದ್ದೀನ್ ಪ್ರಸ್ತಾವಿಕ ಭಾಷಣ ಮಾಡಿದರು. ಇಕ್ಬಾಲ್ ಚೆಮ್ಬನ್ ಕಾರ್ಯಕ್ರಮ ನಿರೂಪಿಸಿದರು.

IFF ಆಯೋಜಿಸಿದ್ದ ಈ ವೆಬ್ ಮೀಟಿಂಗ್ ನಲ್ಲಿ ಹಜ್ ಯಾತ್ರಿಕರ ಸೇವೆಯಲ್ಲಿ ನಿರತರಾದ ಜಗತ್ತಿನ ವಿವಿಧ ಭಾಗದ ಜನರು ಭಾಗವಹಿಸಿದ್ದರು.

Join Whatsapp