ನೊಬೆಲ್ ಶಾಂತಿ ಪ್ರಶಸ್ತಿ: ಮುಹಮ್ಮದ್ ಝುಬೈರ್, ಪ್ರತೀಕ್ ಸಿನ್ಹಾ ಹೆಸರು

Prasthutha|

ನವದೆಹಲಿ: 2022ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಫ್ಯಾಕ್ಟ್ ಚೆಕ್ ಸೈಟ್ ಆಲ್ಟ್ ನ್ಯೂಸ್ ನ ಸಹ-ಸಂಸ್ಥಾಪಕರಾದ ಮುಹಮ್ಮದ್ ಝುಬೈರ್ ಮತ್ತು ಪ್ರತೀಕ್ ಸಿನ್ಹಾ ಕೂಡ ಸೇರಿದ್ದಾರೆ ಎಂದು ಟೈಮ್ ವರದಿ ಮಾಡಿದೆ.

- Advertisement -

ಫ್ಯಾಕ್ಟ್ ಚೆಕ್ ಸೈಟ್ ಆಲ್ಟ್ ನ್ಯೂಸ್ ನ ಸಹ-ಸಂಸ್ಥಾಪಕರಾದ ಸಿನ್ಹಾ ಮತ್ತು ಝುಬೈರ್ ಅವರು ನಾರ್ವೇಜಿಯನ್ ಸಂಸದರ ಮೂಲಕ ಸಾರ್ವಜನಿಕಗೊಳಿಸಲಾದ ಆಯ್ಕೆಗಳ ಆಧಾರದ ಮೇಲೆ ಬಹುಮಾನವನ್ನು ಗೆಲ್ಲುವ ಸ್ಪರ್ಧಿಗಳಲ್ಲಿ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

2018 ರಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ ಝುಬೈರ್ ಅವರನ್ನು ಈ ವರ್ಷದ ಜೂನ್ ನಲ್ಲಿ ಬಂಧಿಸಲಾಗಿತ್ತು. ಇದು ಜಾಗತಿಕ ಆಕ್ರೋಶಕ್ಕೆ ಕಾರಣವಾಯಿತು. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ತಳ ಮಟ್ಟಕ್ಕೆ ಕುಸಿದಿದೆ, ಅಲ್ಲಿ ಸರ್ಕಾರವು ಪಂಥೀಯ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಕರ್ತರಿಗೆ  ಪ್ರತಿಕೂಲ ಮತ್ತು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ ಎಂದು ಅಮೇರಿಕಾದ ಸಮಿತಿಯೊಂದು  ಆರೋಪಿಸಿದೆ.

- Advertisement -

ಸಿನ್ಹಾ ಮತ್ತು ಝುಬೈರ್ ಅವರಲ್ಲದೆ, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ, ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) , ರಷ್ಯಾದ ಭಿನ್ನಮತೀಯ ಮತ್ತು ವ್ಲಾದಿಮಿರ್ ಪುಟಿನ್ ವಿಮರ್ಶಕ ಅಲೆಕ್ಸಿ ನವಲ್ನಿ ಅವರ ಹೆಸರೂ ಕೂಡ ಪಟ್ಟಿಯಲ್ಲಿದೆ.

2022 ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ ಹೆಸರನ್ನು ಸ್ಥಳೀಯ ಕಾಲಮಾನ ಅಕ್ಟೋಬರ್ 7 ರಂದು ಬೆಳಿಗ್ಗೆ 11 ಗಂಟೆಗೆ ಓಸ್ಲೋದಲ್ಲಿ ಘೋಷಿಸಲಾಗುವುದು.



Join Whatsapp