ರಿಲೀ ರೊಸೊವ್ ಚೊಚ್ಚಲ ಶತಕ| ರೋಹಿತ್‌ ಬಳಗಕ್ಕೆ  228 ರನ್‌ ಗೆಲುವಿನ ಗುರಿ

Prasthutha|

ಇಂದೋರ್:‌

- Advertisement -

ರಿಲೀ ರೊಸೊವ್ ಗಳಿಸಿದ ಆಕರ್ಷಕ ಶತಕದ ನೆರವಿನಿಂದ ಮಿಂಚಿದ ಪ್ರವಾಸಿ ಆಫ್ರಿಕಾ, ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ 3 ವಿಕೆಟ್‌ ನಷ್ಟದಲ್ಲಿ 227 ರನ್‌ಗಳಿಸಿದೆ.

ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತರೂ ತಲೆಕೆಸಿಡಿಕೊಳ್ಳದ ಪ್ರವಾಸಿ ತಂಡ, ಭರ್ಜರಿ ಬ್ಯಾಟಿಂಗ್‌ ನಡೆಸಿದೆ. ಇನ್ನಿಂಗ್ಸ್‌ ಆರಂಭಿಸಿದ ನಾಯಕ ತೆಂಬ ಬವುಮಾ, ಕಳಪೆ ಬ್ಯಾಟೀಮಗ್‌ ಪ್ರದರ್ಶನ ಈ ಪಂದ್ಯದಲ್ಲೂ (3 ರನ್‌) ಮುಂದುವರೆಯಿತು. ಆದರೆ ಕ್ವಿಂಟನ್‌ ಡಿ ಕಾಕ್‌ ಜೊತೆಗೂಡಿದ ರೊಸೊವ್‌ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

- Advertisement -

ಕ್ವಿಂಟನ್‌ ಡಿ ಕಾಕ್‌ 68 ರನ್‌ ಗಳಿಸಿದ್ದ ವೇಳೆ (43 ಎಸೆತ, 4×6, 6×4) ರನೌಟ್‌ಗೆ ಬಲಿಯಾದರು. ಮತ್ತೊಂದು ತುದಿಯಲ್ಲಿ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದ ರಿಲೀ ರೊಸೊವ್, ಭರ್ತಿ 100 ರನ್‌ಗಳಿಸಿ . (48 ಎಸೆತ, 4×7, 6×8 ) ಅಜೇಯರಾಗುಳಿದರು. ತಲಾ 4 ಓವರ್‌ ಎಸೆದ ದೀಪಕ್‌ ಚಾಹರ್‌ 48 ರನ್‌ ಮತ್ತು ಹರ್ಷಲ್‌ ಪಟೇಲ್‌ 49 ರನ್‌ ಬಿಟ್ಟುಕೊಟ್ಟು ದುಬಾರಿಯಾದರು.

ಭಾರತ, ತಂಡದಲ್ಲಿ ಮೂರು ಬದಲಾವಣೆ

ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ತಮ್ಮದಾಗಿಸಿಕೊಂಡಿರುವ ಟೀಮ್‌ ಇಂಡಿಯಾ, ಇಂದೋರ್‌ನ ಔಪಚಾರಿಕ ಪಂದ್ಯದಲ್ಲಿ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಆರಂಭಿಕ ಕೆ.ಎಲ್‌. ರಾಹುಲ್‌ ಮತ್ತು ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಬೆನ್ನುನೋವಿನಿಂದ ಬಳಲುತ್ತಿರುವ ಯುವ ವೇಗಿ ಅರ್ಷದೀಪ್‌ ಸಿಂಗ್‌ ತಂಡದಿಂದ ಹೊರಗುಳಿದಿದ್ದಾರೆ.

ಕೊಹ್ಲಿ ಜಾಗದಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತು ರಾಹುಲ್‌ ಬದಲು ಮುಹಮ್ಮದ್‌ ಸಿರಾಜ್‌ ತಂಡವನ್ನು ಕೂಡಿಕೊಂಡಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಅರ್ಷದೀಪ್‌ ಬದಲು ಉಮೇಶ್‌ ಯಾದವ್‌ ಆಡಲಿದ್ದಾರೆ. ನಾಯಕ ರೋಹಿತ್‌ ಶರ್ಮಾ ಜೊತೆ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅನ್ರಿಚ್ ನಾರ್ಟ್ಜೆ ಬದಲು ಡ್ವೈನ್ ಪ್ರಿಟೋರಿಯಸ್ ಆಡಲಿದ್ದಾರೆ. ಈಗಾಗಲೇ 2-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿರುವ ರೋಹಿತ್‌ ಬಳಗ, ಅಂತಿಮ ಪಂದ್ಯವನ್ನೂ ಗೆದ್ದು‘ಕ್ಲೀನ್‌ಸ್ವೀಪ್‌’ ಸಾಧನೆಯ ಗುರಿ ಹೊಂದಿದೆ.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ ಅಂತರದಲ್ಲಿ ಗೆದ್ದಿದ್ದ ಭಾರತ,  ಗುವಾಹಟಿಯಲ್ಲಿ ಭಾನುವಾರ ನಡೆದಿದ್ದ ಪಂದ್ಯವನ್ನು 16 ರನ್‌ಗಳಿಂದ ಗೆದ್ದಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ಮೊದಲ ಬಾರಿ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು.



Join Whatsapp