ಸ್ವಚ್ಛ ಭಾರತ್: 20ನೇ ಸ್ಥಾನ ಪಡೆದ ಕರ್ನಾಟಕ

Prasthutha|

ನವದೆಹಲಿ: ಕೇಂದ್ರ ಸರಕಾರ ಸ್ವಚ್ಛ ಭಾರತ್ ಮಿಷನ್ ಅಡಿ ನಡೆಸಿದ ವಾರ್ಷಿಕ ಸ್ವಚ್ಛತೆಯ ಸಮೀಕ್ಷೆ-2022ರ ಪ್ರಕಾರ ತೆಲಂಗಾಣ ರಾಜ್ಯ ಅಗ್ರಸ್ಥಾನ ಮತ್ತು ಹರಿಯಾಣ ದ್ವಿತೀಯ ಸ್ಥಾನ ಪಡೆದಿದ್ದು, ಕರ್ನಾಟಕಕ್ಕೆ 20ನೇ ಸ್ಥಾನ ದೊರಕಿದೆ.

- Advertisement -

ಸಮೀಕ್ಷೆಯಲ್ಲಿ ತೆಲಂಗಾಣ 971 ಮತ್ತು ಕರ್ನಾಟಕ 635 ಅಂಕಗಳನ್ನು ಪಡೆದಿವೆ. ಸಮೀಕ್ಷೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಮುಟ್ಟಿನ ನೈರ್ಮಲ್ಯ ನಿರ್ವಹಣೆ, ಮುಟ್ಟಿನ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಯಲು ಮಲವಿಸರ್ಜನೆ ಮುಕ್ತ ಹಳ್ಳಿಗಳನ್ನು ಕೇ೦ದ್ರೀಕರಿಸಲಾಗಿತ್ತು.

ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆ ದೇಶದಲ್ಲೇ ಅತ್ಯಂತ ಸ್ವಚ್ಛ ಜಿಲ್ಲೆಯೆನಿಸಿ, ಮೊದಲ ಸ್ಥಾನ ಸಂಪಾದಿಸಿದೆ. ಭಿವಾನಿ ಜಿಲ್ಲೆಯ 22 ಗ್ರಾಮಗಳಲ್ಲಿ ಮಳೆ, ಗಲೀಜು ನೀರು ನಿರ್ವಹಣೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.  ಇದರೊಂದಿಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಿಷನ್ ಅಮೃತ್ ಸರೋವರ ಯೋಜನೆಯಡಿ 24 ಕೆರೆಗಳನ್ನು ನವೀಕರಿಸಿ ಸುಂದರಗೊಳಿಸಲಾಗಿದೆ.

- Advertisement -

ತೆಲಂಗಾಣದ ಜರಿಯಲ್ಸ್ ಮತ್ತು ನಿಜಾಮಾಬಾದ್ ಜಿಲ್ಲೆಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಿಟ್ಟಿಸಿವೆ. ಉಡುಪಿ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಜಿಲ್ಲೆಗಳ ಪೈಕಿ 129ನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ.



Join Whatsapp