ಗಾಂಧೀಜಿಯನ್ನು ರಾಕ್ಷಸನಾಗಿಸಿದ ಕೋಲ್ಕತ್ತದ ಹಿಂದೂ ಮಹಾಸಭಾ ಕಾಳಿ ಪೆಂಡಾಲ್; ಟೀಕೆಯ ಬಳಿಕ ಬದಲಾದ ಮೂರ್ತಿ

Prasthutha|

ಕೋಲ್ಕತ್ತಾ: ಕೊಲ್ಕತ್ತದ ಅಖಿಲ ಭಾರತ ಹಿಂದೂ ಮಹಾ ಸಭಾ,  ದುರ್ಗಾ ಪೂಜೆ ಪೆಂಡಾಲ್ ನಲ್ಲಿ ದೋತಿ ಮತ್ತು ಊರುಗೋಲು ಹಿಡಿದ ಗಾಂಧೀಜಿಯನ್ನು ಹೋಲುವ ರಾಕ್ಷಸ ಮೂರ್ತಿಯನ್ನು ನಿಲ್ಲಿಸಿರುವುದಾಗಿ ವರದಿಯಾಗಿದೆ. ಬೋಳು ತಲೆಯ ಈ ಮೂರ್ತಿಯನ್ನು ದುರ್ಗೆ  ಕೊಲ್ಲುವಂತೆ ನಿಲ್ಲಿಸಲಾಗಿದೆ ಎನ್ನಲಾಗಿದೆ.

- Advertisement -

ಸಂಘಟಕರು ಅದನ್ನು ಕಾಕತಾಳೀಯ ಎಂದು ಸಮಜಾಯಿಷಿ ನೀಡಿ, ದೇಶ ವಿಭಜನೆಯ ಕಾರಣಕ್ಕೆ ಗಾಂಧೀಜಿ ಟೀಕಿಸಲ್ಪಡಬೇಕಾದವರು ಎಂದು ಹೇಳಿದ್ದಾರೆ. ಇದನ್ನು ಆಳುವ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಎಡ ಪಕ್ಷ ಸಿಪಿಎಂ, ಬಿಜೆಪಿ ಎಲ್ಲರೂ ಖಂಡಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾ ಸಭಾದ ಪಶ್ಚಿಮ ಬಂಗಾಳ ಘಟಕದ ಕಾರ್ಯಾಧ್ಯಕ್ಷ ಚಂದ್ರಚೂಡ ಗೋಸ್ವಾಮಿಯವರನ್ನು ಸಂಪರ್ಕಿಸಿದಾಗ “ಬೋಳು ತಲೆಯ, ಕನ್ನಡಕದ ವ್ಯಕ್ತಿ ಗಾಂಧೀಜಿ ಆಗಬೇಕೆಂದೇನೂ ಇಲ್ಲ. ಗಾಂಧೀಜಿ ಯಾವತ್ತೂ ‘ದಾಲ್’ ಹಿಡಿದಿರಲಿಲ್ಲ. ತಾತಿ ದುರ್ಗೆ ಕೊಲ್ಲುವ ವ್ಯಕ್ತಿ ಗಾಂಧೀಜಿಯಂತೆ ಕಾಣಿಸುತ್ತಿರುವುದು ಇದು ಕಾಕತಾಳೀಯ. ಹಲವರು ಇದನ್ನು ಗಾಂಧೀಜಿಯಂತೆ ಕಾಣುವುದಾಗಿ ಹೇಳಿದರು. ಆದರೂ ಗಾಂಧೀಜಿ ಟೀಕೆಗೊಳಪಡಬೇಕಾದ ವ್ಯಕ್ತಿಯೇ ಆಗಿದ್ದಾರೆ” ಎಂದು ಅವರು ಹೇಳಿದರು.

- Advertisement -

  ಎಲ್ಲ ಕಡೆ ಈ ಬಗೆಗೆ ಟೀಕೆ ಎದುರಾಗುತ್ತಲೇ ಅಕ್ಟೋಬರ್ 3ರಂದು ಅಖಿಲ ಭಾರತ ಹಿಂದೂ ಮಹಾ ಸಭಾದ ಸಂಘಟಕರು ಗಾಂಧೀಜಿಯಂತೆ ತೋರುತ್ತಿದ್ದ ಮೂರ್ತಿಯನ್ನು ಬದಲಿಸಿ, ದುರ್ಗೆಯಿಂದ ಕೊಲ್ಲಲ್ಪಡುವ ಅಸುರ ಮೂರ್ತಿಯನ್ನು ನಿಲ್ಲಿಸಿದ್ದಾರೆ.

ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.



Join Whatsapp