ಇಂಡಿಗೋ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ : ಪ್ರಕರಣ ದಾಖಲು

Prasthutha|

ಮುಂಬೈ : ಪ್ರಸಿದ್ಧ ವಿಮಾನಯಾನ ಸಂಸ್ಥೆ ʼಇಂಡಿಗೋʼ ವಿಮಾನವನ್ನು ಸ್ಫೋಟಿಸುವುದಾಗಿ ಇಮೇಲ್‌ ಮೂಲಕ ಒಬ್ಬಾತ ಬೆದರಿಕೆ ಹಾಕಿದ ಘಟನೆಯು ಸಂಭವಿಸಿದೆ. ಈ ಕುರಿತು ಸಹರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಅಪರಿಚಿತ ವ್ಯಕ್ತಿಯೊಬ್ಬ ಮುಂಬೈನ ಇಂಟರ್‌ ನ್ಯಾಶನಲ್‌ ಏರ್‌ ಪೋರ್ಟ್‌ ಲಿಮಿಟೆಡ್‌ ಗೆ ಇಮೇಲ್‌ ರವಾನೆಯ ಮೂಲಕ ಇಂಡಿಗೋ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ʼಈ ಕುರಿತು ಕುಲಂಕುಷ ತನಿಖೆ ಮಾಡಿದ ಬಳಿಕ ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆʼ. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹುಸಿ ಬೆದರಿಕೆಗಳು ಬರಲು ಕಾರಣವೇನು ಎಂಬುವುದರ ಬಗ್ಗೆಯೂ ಕ್ಷಿಪ್ರವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.   



Join Whatsapp