ಕೊಚ್ಚಿ: ಇದೇ ಬುಧವಾರ ನಿಷೇಧಕ್ಕೊಳಗಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ ಐ) 11 ಕಾರ್ಯಕರ್ತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ವಿಶೇಷ ನ್ಯಾಯಾಲಯ ಶುಕ್ರವಾರ 21 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ ವಾರ ಕೇರಳದ ವಿವಿಧ ಸ್ಥಳಗಳಿಂದ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಎನ್ ಐಎ ಬಂಧಿಸಿದ್ದ ಪಿಎಫ್ ಐ ಕಾರ್ಯಕರ್ತರನ್ನು ಏಳು ದಿನಗಳ ಕಸ್ಟಡಿ ಇಂದು ಕೊನೆಗೊಂಡ ನಂತರ ಎನ್ ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಕರಮನ ಅಶ್ರಫ್ ಮೌಲವಿ, ಸಾದಿಕ್ ಅಹ್ಮದ್, ಶಿಹಾಸ್, ಅನ್ಸಾರಿ ಪಿ, ಎಂ.ಎಂ. ಮುಜೀಬ್, ನಜುಮುದ್ದಿನ್, ಸೈನುದ್ದೀನ್ ಟಿಎಸ್, ಪಿಕೆ ಉಸ್ಮಾನ್, ಯಹಿಯಾ ಕೋಯಾ, ಕೆ ಮುಹಮ್ಮದಲಿ ಮುಂತಾದವರನ್ನು 21 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಮೊದಲು ಅವರನ್ನು ನ್ಯಾಯಾಲಯವು ಇಂದಿನವರೆಗೆ 7 ದಿನಗಳ ಕಾಲ ಎನ್ ಐಎ ಕಸ್ಟಡಿಗೆ ಕಳುಹಿಸಿತ್ತು.