ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23.09 ಲಕ್ಷ ಮೌಲ್ಯದ ಚಿನ್ನ ವಶ

Prasthutha|

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದಿಳಿದ ಪ್ರಯಾಣಿಕರೊಬ್ಬರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 23 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಮಿಕ್ಸರ್ ಗ್ರೈಂಡರ್ನ ಮೋಟರ್ನಲ್ಲಿ ಕಂದು ಬಣ್ಣದ ಲೇಪಿತ ತೈಲದ ರೂಪದಲ್ಲಿ ಬಚ್ಚಿಟ್ಟಿದ್ದ ಚಿನ್ನವನ್ನು ಕಳ್ಳಸಾಗಣೆ ಮಾಡಲು ತಿರುವನಂತಪುರಂ ಮೂಲದ ಪ್ರಯಾಣಿಕರೊಬ್ಬರು ಪ್ರಯತ್ನಪಟ್ಟಿದ್ದು ಅಧಿಕಾರಿಗಳು ಅವರನ್ನು ತಡೆದಿದ್ದಾರೆ ಮತ್ತು 23,09,610 ರೂಪಾಯಿ ಮೌಲ್ಯದ 461 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಲೇಪನವನ್ನು ಬಿಸಿ ಮಾಡಿ ತೆಗೆದುಹಾಕಿದ ನಂತರ, ಚಿನ್ನವು 461 ಗ್ರಾಂ ತೂಕದ 24 ಕ್ಯಾರೆಟ್ ಗಳ ಆಯತಾಕಾರದ ಪಟ್ಟಿಯಾಗಿ ರೂಪುಗೊಂಡಿತು. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp