ಮಂಗಳೂರು: ನಗರದ ಬಾವುಟಗುಡ್ಡೆ ರಸ್ತೆಯಿಂದ ಜ್ಯೋತಿ ವೃತ್ತಕ್ಕೆ ಸೇರುವ ರಸ್ತೆಯ ಒಂದು ಬದಿ ಫುಟ್ ಪಾತ್ ಅನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ತೆರವುಗೊಳಿಸಲಾಗಿದೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು, ಜ್ಯೋತಿ ವೃತ್ತಕ್ಕೆ ಸೇರುವ ರಸ್ತೆಯ ಮೇಲೆಯೇ ಫುಟ್ ಪಾತ್ ನಿರ್ಮಿಸಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿ ಪರಿಣಮಿಸುತ್ತದೆ ಎಂದು ಸಾರ್ವಜನಿಕರು ದೂರಿದ್ದರು. ಇದರಿಂದ ಎಚ್ಚೆತ್ತು ಕೊಂಡ ಸ್ಮಾರ್ಟ್ ಸಿಟಿ ಪ್ರಾಧಿಕಾರ ಬೆಳಗ್ಗೆ ನಿರ್ಮಿಸಲಾಗಿದ್ದ ಫುಟ್ ಪಾತ್ ಅನ್ನು ಸಂಜೆ ವೇಳೆಗೆ ತೆರವು ಮಾಡಿದೆ.
ಈ ಹಿಂದೆ ಬಾವುಟಗುಡ್ಡೆಯಲ್ಲಿ ಪಾರ್ಕಿಂಗ್ ಸ್ಲಾಟ್ ನಿರ್ಮಾಣ ಮಾಡಿ ಆಕ್ಷೇಪ ಬಂದ ಹಿನ್ನೆಲೆ ತೆರವು ಮಾಡಲಾಗಿತ್ತು.