ಭಾರತ್ ಜೋಡೋ ಯಾತ್ರೆ: ರಾಹುಲ್ ನೋಡಿ ಕುಣಿದಾಡಿದ ಯುವತಿ

ತಿರುವನಂತಪುರಂ: ಯುವತಿಯೊಬ್ಬಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೋಡಿ ಖುಷಿಯಿಂದ ಕೈ ಹಿಡಿದು ಕುಣಿದಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇರಳದ ಪಂಡಿಕ್ಕಾಡ್ ಶಾಲಾ ಪಾಡಿಯಿಂದ ಆರಂಭವಾದ ಮೆರವಣಿಗೆ ವೇಳೆ ಅಲ್ಲಿಗೆ ಬಂದ ಯುವತಿ ರಾಹುಲ್ ಗಾಂಧಿ ಅವರನ್ನು ನೋಡಿ ಖುಷಿಯಿಂದ ಸಂಭ್ರಮಿಸಿದ್ದಾಳೆ. ಯುವತಿಯ ಉತ್ಸಾಹವನ್ನು ನೋಡಿ ರಾಹುಲ್ ಗಾಂಧಿ ಅವಳನ್ನು ತಬ್ಬಿಕೊಂಡು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.