ಕೊಚ್ಚಿ: ಸೆಪ್ಟೆಂಬರ್ 23 ರಂದು PFI ನಡೆಸಿದ ಹರತಾಳ ವೇಳೆ ತನ್ನ ಬಸ್ಸುಗಳಿಗೆ ಹಾನಿಯಾಗಿದೆ ಆರೋಪಿಸಿದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಇದಕ್ಕೆ ಕಾರಣಕರ್ತರಾದ PFI ಸಂಘಟನೆಯಿಂದ 5.06 ಕೋಟಿ ರೂ. ಪರಿಹಾರವನ್ನು ವಸೂಲ್ ಮಾಡುವಂತೆ ಕೋರಿ ಕೇರಳ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದೆ.
ಹೈಕೋರ್ಟ್ ಈ ಹಿಂದೆ ನೀಡಿದ ಆದೇಶದನ್ವಯ, 7 ದಿನಗಳ ಮುಂಚಿತವಾಗಿ ನೋಟಿಸ್ ನೀಡದೆ PFI ಸಂಘಟನೆ ಏಕಾಏಕಿಯಾಗಿ ಸೆಪ್ಟೆಂಬರ್ 23ರಂದು ಹರತಾಲ್ ಗೆ ಕರೆ ನೀಡಿದ್ದರಿಂದ, PFI ಸಂಘಟನೆಯ ಮೇಲೆ ದಾಖಲಾಗಿದ್ದ ನ್ಯಾಯಾಲಯ ನಿಂದನೆ ಪ್ರಕರಣವನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲೇ PFI ಸಂಘಟನೆಯ ವಿರುದ್ಧ KSRTC ಮತ್ತೊಂದು ಪ್ರಕರಣ ದಾಖಲಿಸಿ, ಪರಿಹಾರಕ್ಕಾಗಿ ಮನವಿ ಮಾಡಿದೆ.
NIA ದೇಶಾದ್ಯಂತ ಪಿ.ಎಫ್.ಐ ಅನ್ನು ಗುರಿಯಾಗಿಸಿ ನಡೆಸಿದ ದಾಳಿ ನಡೆಸಿ, ಅದರ ನಾಯಕರನ್ನು ಬಂಧಿಸಿರುವುದನ್ನು ವಿರೋಧಿಸಿ ಅನೇಕ ಜನರು ಬೀದಿಗಿಳಿದಿದ್ದರು.
ತನ್ನ 58 ಬಸ್’ಗಳಿಗೆ ಹಾನಿಯಾಗಿದೆ ಮತ್ತು ತಮ್ಮ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸುತ್ತಿರುವ ಕಾರಣ ಹರತಾಳ ದಿನದಂದು ಟ್ರಿಪ್’ಗಳನ್ನು ರದ್ದುಗೊಳಿಸಬೇಕಾಯಿತು ಎಂದು KSRTC ಅರ್ಜಿಯಲ್ಲಿ ಉಲ್ಲೇಖಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಕೆ ಜಯಶಂಕರನ್ ನಂಬಿಯಾರ್ ಮತ್ತು ಮುಹಮ್ಮದ್ ನಿಯಾಸ್ ಸಿಪಿ ಅವರ ವಿಭಾಗೀಯ ಪೀಠವು ಸೆಪ್ಟೆಂಬರ್ 29 ರಂದು ನಡೆಸಲಿದೆ.