ಬೈಕ್- ರಿಕ್ಷಾ ಅಪಘಾತ; ಐಟಿಐ ವಿದ್ಯಾರ್ಥಿ ಸಾವು, ಓರ್ವ ಗಂಭೀರ

Prasthutha|

ಸುಳ್ಯ: ಬೈಕ್- ರಿಕ್ಷಾ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ಪರಿವಾರಕಾನ ಬಳಿ ನಡೆದಿದೆ.

- Advertisement -

ಮೃತ ಯುವಕ ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ಪ್ರತೀಕ್ ಐಟಿಐ ವಿದ್ಯಾರ್ಥಿಯಾಗಿದ್ದಾನೆ. ಪ್ರತೀಕ್ ಹಾಗೂ ಸ್ನೇಹಿತ ತೇಜಸ್ ಕಲ್ಲುಗುಂಡಿಯಿಂದ ಸುಳ್ಯಕ್ಕೆ ಬರುತ್ತಿದ್ದಾಗ ಪರಿವಾರಕಾನದ ತಿರುವೊಂದರಲ್ಲಿ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದಿದೆ.

ತೀವ್ರ ಗಾಯಗೊಂಡಿದ್ದ ಬೈಕ್ ಸವಾರರಿಬ್ಬರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಗೆ ತಂದು ದಾಖಲಿಸಿದ್ದು, ಪ್ರತೀಕ್ ಕೊನೆಯುಸಿರೆಳೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ತೇಜಸ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Join Whatsapp