ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್;  7 ಸಾವು, 10 ಮಂದಿ ಗಂಭೀರ 

ಶಿಮ್ಲಾ:  ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದ ಪರಿಣಾಮ ಏಳು ಮಂದಿ ಮೃಪಟ್ಟಿದ್ದು, ಇತರ 10 ಮಂದಿ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 305 ರಲ್ಲಿ ಭಾನುವಾರ ರಾತ್ರಿ 8:30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಚಾಲಕ ಸೇರಿದಂತೆ ವಾಹನದಲ್ಲಿ 17  ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಮೊದಲಿಗೆ ಬಂಜಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕುಲ್ಲು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕುಲ್ಲು ಜಿಲ್ಲೆಯ ಉಪ ಆಯುಕ್ತ ಅಶುತೋಷ್ ಗರ್ಗ್ ತಿಳಿಸಿದ್ದಾರೆ.

- Advertisement -

ಮೃತರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ನಿವಾಸಿಗಳಾಗಿದ್ದು, ಎಲ್ಲರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಬಂಜಾರ್ ನ ಬಿಜೆಪಿ ಶಾಸಕ ಸುರೇಂದರ್ ಶೌರಿ ತಿಳಿಸಿದ್ದಾರೆ.