PFI ವಿರುದ್ಧದ ದಾಳಿ ಮುಸ್ಲಿಮ್ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ: ಸಂಸದ ತೋಲ್ ತಿರುಮಾಳವನ್

Prasthutha|

ಚೆನ್ನೈ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ದ ಮೇಲೆ NIA ಮತ್ತು ಇಡಿ ನಡೆಸಿದ ದೌರ್ಜನ್ಯ ಮತ್ತು ಉನ್ನತ ಮಟ್ಟದ ನಾಯಕರ ಬಂಧನವನ್ನು ವಿಸಿಕೆ ಪಕ್ಷದ ಮುಖ್ಯಸ್ಥ ಮತ್ತು ತಮಿಳುನಾಡು ಸಂಸದ ತೋಲ್ ತಿರುಮಾವಲವನ್ ಖಂಡಿಸಿದ್ದಾರೆ. PFI ಮೇಲೆ ಕೇಂದ್ರೀಯ ಸಂಸ್ಥೆಗಳು ನಡೆಸಿದ ದಾಳಿಯು ಅಲ್ಪಸಂಖ್ಯಾತ ವಿರುದ್ಧ ದ್ವೇಷ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಬಣ್ಣಿಸಿದ್ದಾರೆ.

- Advertisement -

PFI ಮತ್ತು SDPI ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಹಿರಂಗವಾಗಿ ಕಾರ್ಯಾಚರಿಸುವ ಚಳುವಳಿಗಳಾಗಿವೆ ಎಂದು ಅವರು ತಿಳಿಸಿದರು. PFI ಮತ್ತು SDPI ಸಂಘಟನೆಗಳ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಮುಸ್ಲಿಮರಾಗಿದ್ದರೂ, ಈ ಸಂಘಟನೆಗಳು ಎಲ್ಲಾ ಸಮುದಾಯಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಸಂಸದರು ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೂ ಈ ಎರಡು ಚಳುವಳಿಗಳನ್ನು ಭಯೋತ್ಪಾದಕ ಗುಂಪು ಎಂದು ಕರೆಯಲು ಪ್ರಯತ್ನಿಸುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಿಜೆಪಿ ಸರ್ಕಾರವು ಪರ್ಯಾಯ ರಾಜಕೀಯ ಚಳುವಳಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ತಿರುಮಾಳವನ್ ಆರೋಪಿಸಿದ್ದಾರೆ.

ಈ ರೀತಿಯ ಅಲ್ಪಸಂಖ್ಯಾತ ದ್ವೇಷ ರಾಜಕಾರಣವನ್ನು ಬಿಜೆಪಿ ಸರ್ಕಾರ ಕೈಬಿಡಬೇಕು ಎಂದು ಸಂಸದರು ಪಕ್ಷದ ಪರವಾಗಿ ಮನವಿ ಮಾಡಿದರು.



Join Whatsapp