ಬೆಂಗಳೂರು: ಸತ್ಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸದಾ ಜಯದ ದುಂದುಭಿ ಮೊಳಗಿಸಲಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಹೇಳಿದ್ದಾರೆ.
2014 ರಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಚಾರ ಸಭೆಗಳಲ್ಲಿ, ಅದು ಅಧಿಕಾರಕ್ಕೇರಿದರೆ ಪಿಎಫ್ ಐ ಮತ್ತು ಎಸ್ ಡಿಪಿಐಯನ್ನು ನಿಷೇಧಿಸಲಾಗುವುದು ಎಂದಿತ್ತು. ಆದರೆ ಈ ವರೆಗೂ ಅದಕ್ಕೆ ಸಾಧ್ಯವಾಗಲಿಲ್ಲ. ಕಾರಣ, ನಿಷೇಧಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ಅದಕ್ಕಾಗಿ ಈಗ ದಾಳಿ, ಬಂಧನ, ಕಿರುಕುಳ ಮತ್ತು ಅಪಪ್ರಚಾರಕ್ಕೆ ಅದು ಜೋತು ಬಿದ್ದಿದೆ. ಬಿಜೆಪಿ ಸರ್ಕಾರದ ನಿರಂಕುಶ ಜನಪೀಡಕ ನೀತಿ ಮತ್ತು ಆರೆಸ್ಸೆಸ್ ನ ದುಷ್ಟ ಮನುವಾದಿ ಷಡ್ಯಂತ್ರಗಳ ಹಾದಿಯಲ್ಲಿ ಪಿಎಫ್ಐ ಮತ್ತು ಎಸ್ ಡಿಪಿಐ ಭಾರೀ ದೊಡ್ಡ ತೊಡಕಾಗಿದೆ ಎಂದು ಅವರು ಹೇಳಿದ್ದಾರೆ.
ಎಲ್ಲಿಯವರೆಗೆ ಪಿಎಫ್ ಐ ಮತ್ತು ಎಸ್ ಡಿಪಿಐ ಇರುವುದೋ ಅಲ್ಲಿಯವರೆಗೆ “ಹಿಂದುತ್ವ ರಾಷ್ಟ್ರ” ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಮುಖಂಡರು ಹೇಳುತ್ತಾ ಬಂದಿರುವುದು ಸರಿಯಾಗಿಯೇ ಇದೆ. ಈ ದೇಶದಲ್ಲಿ ಮನುವಾದಿ ಫ್ಯಾಶಿಸ್ಟ್ ಆರೆಸ್ಸೆಸ್- ಬಿಜೆಪಿಗಳ ಹೂರಣ, ಷಡ್ಯಂತ್ರ, ಪಾಖಂಡಿತನ ಹಾಗೂ ಭಯೋತ್ಪಾದನೆಗೆ ಸಡ್ಡು ಹೊಡೆದು ಅಚಂಚಲ ಹೋರಾಟಕ್ಕೆ ಟೊಂಕ ಕಟ್ಟಿದ ಪಿಎಫ್ ಐ ಮತ್ತು ಎಸ್ ಡಿಪಿಐ ಯನ್ನು ದಾಳಿ- ಬಂಧನದಿಂದ ಕಟ್ಟಿ ಹಾಕಲು ಸಾಧ್ಯವಿಲ್ಲ. ತಿಳಿದಿರಲಿ. ಸತ್ಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಪಿಎಫ್ಐ ಸದಾ ಜಯದ ದುಂದುಭಿ ಮೊಳಗಿಸಲಿದೆ ಎಂದು ಇಲ್ಯಾಸ್ ತುಂಬೆ ಫೇಸ್ ಬುಕ್ ನಲ್ಲಿ ಪೋಸ್ಟ್ ನಲ್ಲಿ ಬರೆದಿದ್ದಾರೆ.