ಚುನಾವಣಾ ಬಾಂಡ್’ಗಳ ಮೂಲಕ ಶೇಕಡಾ 95 ರಷ್ಟು ದೇಣಿಗೆ ಬಿಜೆಪಿಗೆ ಸಂದಾಯವಾಗುತ್ತಿದೆ: ಅಶೋಕ್ ಗೆಹ್ಲೋಟ್

Prasthutha|

ಕೋಟಾ: ಚುನಾವಣಾ ಬಾಂಡ್’ಗಳ ಮೂಲಕ ಶೇಕಡಾ 95 ರಷ್ಟು ದೇಣಿಕೆಯನ್ನು ಬಿಜೆಪಿ ಪಡೆಯುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಉಳಿದ ಪಕ್ಷಗಳಿಗೆ ದೇಣಿಗೆ ನೀಡಲು ದಾನಿಗಳು ಭಯಪಡುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

- Advertisement -

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರದ ಭಾಗವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಯಸುವ ಭಂಡವಾಳಷಾಹಿಗಳಿಗೆ ಬೆದರಿಕೆವೊಡ್ಡಲಾಗುತ್ತಿದೆ ಎಂದು ಆರೋಪಿಸಿದರು. ಬೇರೆ ಪಕ್ಷಗಳಿಗೆ ದೇಣಿಗೆ ನೀಡಿದ ತಕ್ಷಣ ಇಡಿ ಮತ್ತು ಆದಾಯ ತೆರಿಗೆ ಇಲಾಖೆಯು ದಾನಿಗಳ ಮನೆಯ ಬಾಗಿಲು ತಟ್ಟುತ್ತದೆ ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷ ಮತ್ತು ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಯೂ ಗೆಹ್ಲೋಟ್ ಮಾತನಾಡಿದರು. ತಮ್ಮ ವಿರುದ್ಧ ಯಾವುದೇ ನಕಾರಾತ್ಮಕ ಸುದ್ದಿಗಳನ್ನು ಹತ್ತಿಕ್ಕಲು ಕೇಜ್ರಿವಾಲ್ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ ಎಂದು ತಿಳಿಸಿದರು.

Join Whatsapp