ಜೈಪುರ : ರಾಜಸ್ಥಾನದ ಕೋಟದ ಸರಕಾರಿ ಆಸ್ಪತ್ರೆಯೊಂದರಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ 9 ನವಜಾತ ಶಿಶುಗಳು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.
ಜೆಕೆ ಲಾನ್ ಆಸ್ಪತ್ರೆಯಲ್ಲಿ 1-4 ದಿನಗಳ ಹಸುಗೂಸುಗಳು ಕೆಲವೇ ಗಂಟೆಗಳ ಅವಧಿಯಲ್ಲಿ ಸಾವಿಗೀಡಾಗಿವೆ. ಸಂಭವಿಸಿರುವ ಸಾವುಗಳು ಸಹಜವಾದುದು, ಅಸಹಜವಾದುದಲ್ಲ ಅಥವಾ ಗಂಭೀರ ಸಮಸ್ಯೆಯಿಂದಲ್ಲ ಅಥವಾ ಸೋಂಕಿನಿಂದ ಅಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಸಭೆಯೊಂದನ್ನು ಆಯೋಜಿಸಿದ್ದಾರೆ.