ಮದ್ಯಪಾನ ಮಾಡಿ ಹೊಡೆದಾಟ : ಯುಪಿಯಲ್ಲಿ ಎಂಟು ಪೊಲೀಸರು ಅಮಾನತು

ಬಹ್ರೈಚ್ (ಯು.ಪಿ): ಸಹೋದ್ಯೋಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪರಸ್ಪರ ಹೊಡೆದಾಡಿದ ಆರೋಪದ ಮೇಲೆ ಎಂಟು ಯುಪಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಎಸ್ಪಿ ವಿಪಿನ್ ಮಿಶ್ರಾ, ಮದ್ಯ ಸೇವಿಸಿ ಉತ್ತರ ಪ್ರದೇಶ ಪೊಲೀಸ್ ವ್ಯವಸ್ಥೆಗೆ ಹಾನಿ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

- Advertisement -

ರಿಝಿಯಾ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಹೀಪ್ ಶುಕ್ಲಾ ಭಾನುವಾರ ರಾತ್ರಿ ಆಯೋಜಿಸಿದ್ದ ಪಾರ್ಟಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸಲು ಎಎಸ್ಪಿ(ನಗರ) ಕುನ್ವರ್ ಜ್ಞಾನಂಜಯ್ ಸಿಂಗ್ ಅವರಿಗೆ ವಹಿಸಲಾಗಿದೆ. ಶುಕ್ಲಾ ಅವರಲ್ಲದೆ ಕಾನ್ಸ್ ಟೇಬಲ್ ಗಳಾದ ರಾಜೇಶ್ ಯಾದವ್, ಅಮಿತ್ ಯಾದವ್, ಅಜಯ್ ಯಾದವ್, ಪಂಕಜ್ ಯಾದವ್, ವಿನೋದ್ ಯಾದವ್, ಪವನ್ ಯಾದವ್, ಅಫ್ಜಲ್ ಖಾನ್ ರನ್ನು ಅಮಾನತು ಮಾಡಲಾಗಿದೆ.

- Advertisement -