77 ವರ್ಷಗಳ ನಂತರ 2ನೇ ಮಹಾ ಯುದ್ಧದ ವಿಮಾನ ಅವಶೇಷ ಪತ್ತೆ!

Prasthutha|

- Advertisement -

ಹೊಸದಿಲ್ಲಿ: 2ನೇ ಮಹಾ ಯುದ್ಧದ ಸಮಯದಲ್ಲಿ ನಾಪತ್ತೆಯಾಗಿದ್ದ ವಿಮಾನ ಅವಶೇಷ ಇದೀಗ 77 ವರ್ಷಗಳ ನಂತರ ಪತ್ತೆಯಾಗಿದೆ.

77 ವರ್ಷಗಳ ಹಿಂದೆ ನಡೆದ ಹಲವು ಸಾವು ನೋವುಗಳಿಗೆ ಕಾರಣವಾಗಿದ್ದ ಎರಡನೇ ಮಹಾ ಯುದ್ಧದ ಸಮಯದಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

1945ರ ಮಹಾಯುದ್ಧದ ಮೊದಲ ವಾರದಲ್ಲಿ ದಕ್ಷಿಣ ಚೀನಾದದ ಕುನ್ನಿಂಗ್ ನಿಂದ ವಿಮಾನವೊಂದು 13 ಜನರನ್ನು ಹೊತ್ತೊಯ್ಯುತ್ತಿತ್ತು. ಬಳಿಕ ಈ ವಿಮಾನ ಅರುಣಾಚಲ ಪ್ರದೇಶದಲ್ಲಿ ಪರ್ವತ ಪ್ರದೇಶದಲ್ಲಿ ಹೋಗುತ್ತಿರುವಾಗ ಕಣ್ಮರೆಯಾಗಿತ್ತು.

ಆದರೆ ಕ್ಲೀಟನ್ ಕುಕ್ಲಸ್ ಸಾಹಸಿಗರೊಬ್ಬರ ತಂಡವೊಂದು ಈ ವಿಮಾನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

Join Whatsapp