75ನೇ ಸ್ವಾತಂತ್ರ್ಯದ ಸಂಭ್ರಮ: ಅಸ್ವಸ್ಥ ಬುಡಕಟ್ಟು ಮಹಿಳೆಯನ್ನು ಆಸ್ಪತ್ರೆಗೆ ಹೊತ್ತೊಯ್ದ ವೀಡಿಯೋ ವೈರಲ್

Prasthutha|

ಮುಂಬೈ: ಒಂದು ಕಡೆ ಭಾರತ ದೇಶವು, ಸ್ವಾತಂತ್ಯದ ಅಮೃತ ಮಹೋತ್ಸವದಲ್ಲಿದ್ದರೆ, ಮತ್ತೊಂದು ಕಡೆ ದೇಶದ ಬುಡಕಟ್ಟು ಸಮುದಾಯ ಇನ್ನೂ ರಸ್ತೆ, ಮೂಲಸೌಕರ್ಯ ಮತ್ತು ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿ ಯಾವ ಸ್ವಾತಂತ್ರ್ಯೂ ಇಲ್ಲದೆ ಬದುಕುತ್ತಿದೆ.

- Advertisement -

ಈ ಮಧ್ಯೆ ಅಸ್ವಸ್ಥ ಬುಡಕಟ್ಟ ಮಹಿಳೆಯನ್ನು ಚಿಕಿತ್ಸೆಗಾಗಿ ಸುಮಾರು 23 ಕಿ.ಮೀ ಮಂಚದ ಮೇಲೆ ಮಲಗಿಸಿ ಆಸ್ಪತ್ರೆಗೆ ಸಾಗಿಸಬೇಕಾಗಿ ಹೀನಾಯ ಪರಿಸ್ಥಿತಿ ಮಹಾರಾಷ್ಟದ ಗಡ್ಚಿರೋಲಿ ಜಿಲ್ಲೆಯ ಭಮ್ರಗಢದದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ನೆಟ್ಟಿಗರು ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.

Join Whatsapp