ಪ್ರಾಂಶುಪಾಲರು, ವಿದ್ಯಾರ್ಥಿಗಳು ಸೇರಿದಂತೆ ಒಂದೇ ಶಾಲೆಯ 75 ಮಂದಿಗೆ ಕೋವಿಡ್ ! ಒಂದು ವಾರ ಶಾಲೆ ಮುಚ್ಚಲು ಆದೇಶ

Prasthutha|

ಯಾದಗಿರಿ; ದಾವಣಗೆರೆ, ಕೊಪ್ಪ, ಕೊಡಗಿನ ನವೋದಯ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಇದೀಗ ಯಾದಗಿರಿ ತಾಲೂಕಿನ ಹೋತಪೇಟೆಯ ನವೋದಯ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ಜೊತೆಗೆ 75 ಮಕ್ಕಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

- Advertisement -

ಹೋತಪೇಟೆಯಲ್ಲಿರುವ ನವೋದಯ ಶಾಲೆಯಲ್ಲಿ 538 ವಿದ್ಯಾರ್ಥಿಗಳಿದ್ದು, ಇವರಲ್ಲಿ 424 ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. 424 ವಿದ್ಯಾರ್ಥಿಗಳ ಪೈಕಿ 75 ಮಕ್ಕಳಿಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿದೆ. ಇದರಲ್ಲಿ ಪ್ರಿನ್ಸಿಪಾಲ್ ಸೇರಿದಂತೆ 7 ಸಿಬ್ಬಂದಿಯ ವರದಿಯೂ ಪಾಸಿಟಿವ್ ಆಗಿ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶಾಲೆಯನ್ನು ಒಂದು ವಾರ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಎಲ್ಲಾ ಮಕ್ಕಳನ್ನೂ ಅವರವರ ಊರಿಗೆ ಕಳುಹಿಸಲಾಗುತ್ತಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಹೊಂ ಐಸೊಲೆಷನ್ ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Join Whatsapp