ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಾಗತಿಕವಾಗಿ ಮೊದಲ ಸ್ಥಾನ ಪಡೆದ ಯುಎಇ

Prasthutha|

ಭಾರತಕ್ಕೆ 38ನೇ ಸ್ಥಾನ

- Advertisement -

ದುಬೈ: ಕೋವಿಡ್ ವಿರುದ್ಧ ಹೋರಾಟದಲ್ಲಿ ಯುಎಇ ಜಾಗತಿಕವಾಗಿ ಮೊದಲ ಸ್ಥಾನ ಪಡೆದಿದೆ.

ಅಮೆರಿಕ ಮೂಲದ ಪ್ರಮುಖ ಸಂಶೋಧನಾ ಸಂಸ್ಥೆಯಾದ ಕನ್ಸ್ಯೂಮರ್ ಚಾಯ್ಸ್ ಸೆಂಟರ್ ಸಂಗ್ರಹಿಸಿದ ಜಾಗತಿಕ ಸೂಚ್ಯಂಕದಲ್ಲಿ ಯುಎಇ ಅಗ್ರಸ್ಥಾನ ಪಡೆದಿದೆ.

- Advertisement -

ಎರಡನೇ ಸ್ಥಾನವನ್ನು ಸೈಪ್ರಸ್ ಪಡೆದುಕೊಂಡಿದ್ದು, ಮೂರನೇ ಸ್ಥಾನ ಬಹ್ರೈನ್ ಮತ್ತು ಇಸ್ರೇಲ್ ನಾಲ್ಕನೇ ಸ್ಥಾನವನ್ನು ಪಡೆದಿದೆ. ಭಾರತ 38ನೇ ಸ್ಥಾನವನ್ನು ಪಡೆದಿದೆ.

ವ್ಯಾಕ್ಸಿನೇಷನ್, ಕೋವಿಡ್ ಪರೀಕ್ಷೆ ಮತ್ತು ಬೂಸ್ಟರ್ ಡೋಸ್ಗಳ ಸೇವೆಯಿಂದ ಯುಎಇ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಲಕ್ಸೆಂಬರ್ಗ್, ಡೆನ್ಮಾರ್ಕ್, ಯುಕೆ, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಮಾಲ್ಟಾ ಟಾಪ್10 ರಲ್ಲಿದೆ.

ಕಳೆದ ವರ್ಷ ಮಾರ್ಚ್ ಸೂಚ್ಯಂಕದಲ್ಲಿ ಯುಎಇ ಎರಡನೇ ಸ್ಥಾನದಲ್ಲಿತ್ತು. ಆದರೆ ನವೆಂಬರ್ ವೇಳೆಗೆ ಯುಎಇ ಮೊದಲ ಸ್ಥಾನಕ್ಕೆ ಏರಿತ್ತು.

Join Whatsapp