ಮೈಸೂರು ದಸರಾಗೆ ಕೊಡಗಿನಿಂದ‌ 7 ಸಾಕಾನೆಗಳು

Prasthutha|

ಮಡಿಕೇರಿ: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಹಾಗೂ ನಾಗರಹೊಳೆಯ ಮತ್ತಿಗೋಡು ಸಾಕಾನೆ ಶಿಬಿರದಿಂದ 7 ಸಾಕಾನೆಗಳು ಮೈಸೂರಿಗೆ ತೆರಳಿದೆ.

- Advertisement -

ಮೊದಲ ಹಂತದಲ್ಲಿ ದುಬಾರೆ ಶಿಬಿರದ ಕಾವೇರಿ ಮತ್ತು ಧನಂಜಯ ನಾಗರಹೊಳೆಯ ಮತ್ತಿಗೋಡು ಶಿಬಿರದ ಅಭಿಮನ್ಯು, ಅರ್ಜುನ, ಭೀಮ, ಗೋಪಾಲಸ್ವಾಮಿ, ಮಹೇಂದ್ರ  ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಣ್ಯಾಧಿಕಾರಿಗಳು ಬೀಳ್ಕೊಟ್ಟರು. ಲಾರಿ ಮೂಲಕ ಮಾವುತ ಕವಾಡಿಗರೊಂದಿಗೆ ವೀರನಹೊಸಳ್ಳಿಯತ್ತ ಸಾಕಾನೆಗಳು ತೆರಳಿತು. ಎರಡನೇ ಹಂತದಲ್ಲಿ ಗೋಪಿ, ಶ್ರೀರಾಮ, ವಿಜಯ ಹೆಚ್ಚುವರಿಯಾಗಿ ತೆರಳಲಿವೆ.

ಮೈಸೂರು ದಸರಾ ಗಜಪಯಣದಲ್ಲಿ ಅಭಿಮನ್ಯು ಕ್ಯಾಪ್ಟನ್ಸಿಯಲ್ಲಿ ದಸರಾದಲ್ಲಿ ಭಾಗವಹಿಸುವ 14 ಆನೆಗಳ

- Advertisement -

ಪಟ್ಟಿ ಸಿದ್ದವಾಗಿದೆ. ಈಗಾಗಲೇ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳು

ಮೈಸೂರಿನ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಳ್ಳಿಯಲ್ಲಿ ಮೊದಲ ಹಂತದಲ್ಲಿ 9 ಆನೆಗಳು ನಾಳೆ ಆರಂಭವಾಗುವ ಗಜಪಯಣದಲ್ಲಿ ಮೈಸೂರಿಗೆ ಆಗಮಿಸಲಿವೆ.

ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿಭೀಮ, ಗೋಪಾಲ ಸ್ವಾಮಿ, ಅರ್ಜುನ, ವಿಕ್ರಮ, ಧನಂಜಯ, ಗೋಪಿ, ಕಾವೇರಿ, ಶ್ರೀರಾಮ, ವಿಜಯ, ಚೈತ್ರ, ಲಕ್ಷ್ಮಿ, ಪಾರ್ಥಸಾರಥಿ ಪಾಲ್ಗೊಳ್ಳಲಿವೆ.

ಎರಡನೇ ಹಂತದಲ್ಲಿ ಐದು ಆನೆಗಳು ಮೈಸೂರಿಗೆ ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬಾರಿ ಹಾಗೂ ಮತ್ತಿಗೋಡು ಶಿಬಿರದಲ್ಲಿ ಸಂಪ್ರದಾಯ ಪೂಜೆಯೊಂದಿಗೆ ಆನೆಗಳನ್ನು ಅರಣ್ಯಾಧಿಕಾರಿಗಳು ಬೀಳ್ಕೊಟ್ಟಿದ್ದಾರೆ.

ಈ ಸಂದರ್ಭ  ಡಿ.ಎಫ್.ಓ  ಪೂವಯ್ಯ, ಎಸಿಎಫ್ ಗೋಪಾಲ್, ಆರ್.ಎಫ್.ಓ ಶಿವರಾಂ, ಡಿ.ಆರ್.ಎಫ್.ಓ ರಂಜನ್ ಹಾಜರಿದ್ದರು.

Join Whatsapp