ರಾತ್ರೋರಾತ್ರಿ 7 ಕೋಟಿ ರೂ. ಒಡೆಯನಾದ ಪಾಕಿಸ್ತಾನದ ಮೀನುಗಾರ!

Prasthutha|

ಕರಾಚಿ: ಪಾಕಿಸ್ತಾನದ ಮೀನುಗಾರರೊಬ್ಬರು ಹಿಡಿದ ಮೀನು ಅವರನನ್ನು ರಾತ್ರೊರಾತ್ರಿ ಏಳು ಕೋಟಿ ರೂಪಾಯಿಯ ಒಡೆಯನನ್ನಾಗಿಸಿದ ಘಟನೆ ನಡೆದಿದೆ. ವೈದ್ಯಕೀಯ ಸಂಶೋಧನೆ, ಔಷಧಗಳಿಗೆ ಬಳಸುವ ಅಪರೂಪದ ಮೀನುಗಳು ಸಿಕ್ಕ ಪಾಕಿಸ್ತಾನ ಮೀನುಗಾರ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

- Advertisement -

ಕರಾಚಿಯ ಇಬ್ರಾಹಿಂ ಹೈದರಿ ಗ್ರಾಮದ ನಿವಾಸಿ ಹಾಜಿ ಬಲೋಝ್ ಭಾರೀ ಬೇಡಿಕೆಯ ಮತ್ತು ಗೋಲ್ಡನ್ ಫಿಶ್ ಎಂದೇ ಖ್ಯಾತವಾದ `ಸೋವಾ’ ಜಾತಿಯ ಮೀನುಗಳನ್ನು ಹಿಡಿಯುವ ಮೂಲಕ ದಿಢೀರನೆ ಕೋಟ್ಯಧಿಪತಿ ಆಗಿದ್ದಾರೆ.

ಸೋಮವಾರ ಮೀನು ಹಿಡಿಯಲು ಹೋಗಿದ್ದ ಹಾಜಿಗೆ ಬಲೋಝ್ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆಯ ಮೀನಾದ ಸೋವಾ ಜಾತಿಯ ಮೀನುಗಳು ಕೆಜಿ ಗಟ್ಟಲೆ ಸಿಕ್ಕಿವೆ. ಇಂದು ಕರಾಚಿ ಬಂದರಿಗೆ ಮರಳಿದ ಅವರು ಆ ಮೀನುಗಳನ್ನು ಹರಾಜಿಗೆ ಹಾಕಿದಾಗ ಅಚ್ಚರಿಗೊಳ್ಳುವ ಸರದಿ ಸ್ವತಹ ಅವರದ್ದೂ ಆಗಿತ್ತು. ಒಂದೇ ಹರಾಜಿನಲ್ಲಿ ಅವರಿಗೆ ಮೀನುಗಳು ಸುಮಾರು 7 ಕೊಟಿ ರೂ. ತಂದುಕೊಟ್ಟಿದೆ.

- Advertisement -

ಸೋವಾ ಮೀನು ವೈದ್ಯ ಲೋಕದಲ್ಲಿ ಭಾರೀ ಬೇಡಿಕೆಯ ಮೀನು. ಈ ಮೀನಿಗೆ ಕನಿಷ್ಠ 7 ಲಕ್ಷ ರೂ. ಬೇಡಿಕೆ ಇದೆ. ಸೋವಾ ಮೀನು 20ರಿಂದ 40 ಕೆಜಿ ತೂಕ ಹೊಂದಿದ್ದು, 1.5 ಮೀಟರ್ ಉದ್ದವಿರುತ್ತದೆ.ಇದು ಅತೀ ಹೆಚ್ಚು ರೋಗ ನಿರೋಧಕ ಹೊಂದಿದ್ದು, ಇದರ ತೂಕ ಹಾಗೂ ಅಳತೆಯ ಮೇಲೆ ದರ ನಿಗದಿ ಮಾಡಲಾಗುತ್ತದೆ. ಈ ಮೀನಿನ ಬೊಜ್ಜು ಭಾಗವನ್ನು ಔಷಧಿಗೆ ಮಾತ್ರವಲ್ಲದೇ ಶಸ್ತ್ರಚಿಕಿತ್ಸೆಗೂ ಬಳಸಲಾಗುತ್ತದೆ.



Join Whatsapp