ಶಿಕಾರಿಪುರ ಬಿಜೆಪಿ ಅಧ್ಯಕ್ಷನಿಂದ ಮಹಿಳೆಯ ಮೇಲೆ ಹಲ್ಲೆ: ಪ್ರಕರಣ ದಾಖಲು

Prasthutha|

ಶಿಕಾರಿಪುರ: ಶಿಕಾರಿಪುರ ತಾಲೂಕಿನ ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಅರಿಶಿಣಗಟ್ಟದಲ್ಲಿ ನಡೆದಿದೆ.

- Advertisement -


ವೀರೇಂದ್ರ ಪಾಟೀಲ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.


ಅರಿಸಿಣಗೆರೆ ಗ್ರಾಮದ ನಿವಾಸಿ ಶೋಭಾ ದೂರು ನೀಡಿದ ಮಹಿಳೆ. ಆದರೆ ಮಹಿಳೆ ಮನೆಯವರೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಾಗೂ ನನ್ನ ಅತ್ತಿಗೆ ಮೇಲೆ ನಡೆಸಿದ್ದಾರೆ ಎಂದು ಆರೋಪಿಸಿ ವೀರೇಂದ್ರ ಮಹಿಳೆ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

- Advertisement -

ವಿಡಿಯೋದಲ್ಲಿ ಇರುವಂತೆ, ವೀರೇಂದ್ರ ಪಾಟೀಲ್ ಅವರು ಮಹಿಳೆ ಶೋಭಾ ಅವರ ಕುತ್ತಿಗೆ, ಕೈ ಹಿಡಿದು ಅವಾಜ್ ಹಾಕಿದ್ದನ್ನು ಕೂಡ ಕಾಣಬಹುದು. ಅಲ್ಲದೆ, ವೀರೇಂದ್ರ ಮತ್ತು ಮಹಿಳೆ ನಡುವಿನ ಹೊಡೆದಾಟದ ವೇಳೆ ಮಹಿಳೆಯ ಮಗಳು ಕಿರುಚಾಡುವುದನ್ನು ಕೇಳಬಹುದು ಮತ್ತು ಅಮ್ಮನ ಬಟ್ಟೆ ಹರಿಯುತ್ತಿದ್ದಾರೆ ಎಂದು ಹೇಳುವುದನ್ನು ಕೇಳಬಹುದು.

Join Whatsapp