ಚೆನ್ನೈ: ಹಣವನ್ನು ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಹಲವರಿಂದ ಸುಮಾರು 600 ಕೋಟಿ ರೂ. ವಂಚಿಸಿದ ಬಿಜೆಪಿ ಮುಖಂಡರಾದ ‘ಹೆಲಿಕಾಪ್ಟರ್ ಬ್ರದರ್ಸ್’ ಎಂದು ಕರೆಯಲ್ಪಡುವ ಗಣೇಶ್ ಮತ್ತು ಸ್ವಾಮಿನಾಥನ್ ಪರಾರಿಯಾಗಿದ್ದಾರೆ.
ತಂಜಾವೂರು ಜಿಲ್ಲಾ ಕ್ರೈಮ್ ಬ್ರಾಂಚ್ ಐಪಿಸಿ ಸೆಕ್ಷನ್ 406, 420 ಮತ್ತು 120 (ಬಿ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಮೊದಲು ಡೈರಿ ಕಂಪನಿಯೊಂದನ್ನು ಪ್ರಾರಂಭಿಸಿದ ಅವರು ನಂತರ ವಿಕ್ಟರಿ ಫೈನಾನ್ಸ್ ಎಂಬ ಹಣಕಾಸು ಸಂಸ್ಥೆಯನ್ನು ಪ್ರಾರಂಭಿಸಿದರು. 2019 ರಲ್ಲಿ ಅರ್ಜುನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ವಾಯುಯಾನ ಕಂಪನಿಯನ್ನು ಪ್ರಾರಂಭಿಸಿದರು.
ಗಣೇಶ್ ನ ಮಗುವಿನ ಜನ್ಮದಿನದಂದು ತಮ್ಮದೇ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಸಿದ್ದರಿಂದಾಗಿ ಇವರಿಬ್ಬರು ‘ಹೆಲಿಕಾಪ್ಟರ್ ಬ್ರದರ್ಸ್’ ಎಂದು ಪ್ರಸಿದ್ಧರಾಗಿದ್ದರು.
ಬಿಜೆಪಿಯ ಪ್ರಮುಖ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇವರು ಒಂದು ವರ್ಷದಲ್ಲಿ ಹಣ ದ್ವಿಗುಣಗೊಳಿಸಿಕೊಡುವುದಾಗಿ ನಂಬಿಸಿ ಹಲವರನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.