ಮುಸ್ಲಿಮರಂತೆ ವೇಷಭೂಷಣ ಧರಿಸಿ ತಿರುಗಾಡುತ್ತಿದ್ದ ಆರು ಜನ ಹಿಂದೂಗಳ ಬಂಧನ

Prasthutha|

ಬೆಳಗಾವಿ: ಹಿಜಾಬ್‌–ಕೇಸರಿಶಾಲು ವಿವಾದ ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಬೆಳಗಾವಿಯ ವೀರಭದ್ರ ನಗರದಲ್ಲಿ ಮುಸ್ಲಿಮರಂತೆ ವೇಷಭೂಷಣ ಧರಿಸಿ, ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಆರು ಮಂದಿ ಹಿಂದೂ ಧರ್ಮೀಯರನ್ನು ಮಾರ್ಕೆಟ್‌ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಮೂವರು ವಯಸ್ಕರರಿದ್ದು, ಇನ್ನುಳಿದ ಮೂವರು ಅಪ್ರಾಪ್ತರಾಗಿದ್ದಾರೆ.

- Advertisement -

ಭಿಕ್ಷೆ ಬೇಡುವ ನೆಪದಲ್ಲಿ ಮನೆ–ಮನೆಗೆ ಭೇಟಿ ನೀಡುತ್ತಿದ್ದ ಅವರ ಸಂಶಯಾಸ್ಪದ ನಡೆ ಗಮನಿಸಿ ಸ್ಥಳೀಯರು ವಿಚಾರಿಸಿದಾಗ ಅವರು ವೇಷ ಮರೆಸಿಕೊಂಡಿರುವುದು ಗೊತ್ತಾಗಿದೆ

- Advertisement -

‘ಅವರು ಬೀದರ್‌ ಜಿಲ್ಲೆಯ ಹುಮನಾಬಾದ್‌ನವರು ಎಂದು ತಿಳಿಸಿದ್ದಾರೆ. ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದುದ್ದರಿಂದ ಸ್ಥಳೀಯರು ಮಾಹಿತಿ ನೀಡಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ತಪ್ಪಿತಸ್ಥರಾಗಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮಾರ್ಕೆಟ್‌ ಠಾಣೆ ಸಿಪಿಐ ಎಂ.ಎಸ್‌. ತುಳಸಿಗೇರಿ ಹೇಳಿದ್ದಾರೆ.



Join Whatsapp