ಅಮೃತಸರ: ಪಂಚರಾಜ್ಯ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದು, ಪಂಜಾಬ್ ನಲ್ಲಿ ಹಾಲಿ ಮುಖ್ಯಮಂತ್ರಿ ಚರಣ್ ಸಿಂಗ್ ಚನ್ನಿ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಸದ್ಯ ಅವರು ಸೋಲಿನತ್ತ ಮುಖ ಮಾಡುವ ಎಲ್ಲಾ ಲಕ್ಷಣ ಗೋಚರಿಸಿದೆ.
ತನ್ನ ಆಂತರಿಕ ಕಲಹದಿಂದಲೇ ಮನೆ ಮಾತಾಗಿದ್ದ ಕಾಂಗ್ರೆಸ್ ನಿರೀಕ್ಷೆಯಂತೆ ನೆಲಕಚ್ಚಿದೆ. ಪ್ರತಿಯೊಬ್ಬರ ರಾಜಕೀಯ ಲೆಕ್ಕಚಾರವನ್ನು ಬ್ರೇಕ್ ಮಾಡಿ ಆಮ್ ಆದ್ಮಿ ಪಾರ್ಟಿ 83 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ಸರ್ಕಾರ ರಚಿಸುವಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮುವ ಲಕ್ಷಣ ಗೋಚರಿಸಿದೆ.